Thursday, 12th September 2024

ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ: 47.43 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

ಬೆಂಗಳೂರು : ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯಾದ್ಯಂತ ನಗದು, ಮದ್ಯ, ಉಡುಗೊರೆ, ಮಾದಕವಸ್ತುಗಳು ಸೇರಿದಂತೆ ಒಟ್ಟು 47.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿವೆ.

ಮಾ.29 ರಿಂದ ಪೊಲೀಸ್, ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಜಾಗೃತ ದಳಗಳು ರಾಜ್ಯಾ ದ್ಯಂತ ಕಾರ್ಯಾಚರಣೆ ನಡೆಸಿ 12.82 ಕೋಓಇ ರೂ. ನಗದು, 16.02 ಕೋಟಿ ರೂ.ಮೌಲ್ಯದ 2.78 ಲಕ್ಷ ಲಕ್ಷ ಲೀ. ಮದ್ಯ, 41.26 ಲಕ್ಷ ರೂ.ಮೌಲ್ಯದ 79.44 ಕೆ.ಜಿ.ಮಾದಕವಸ್ತುಗಳು. 6.72 ಕೋಓಟಿ ರೂ. ಮೌಲ್ಯದ 13.575 ಕೆ.ಜಿ. ತೂಕದ ಚಿನ್ನ, 63.98 ಲಕ್ಷ ರೂ. ಮೌಲ್ಯದ 88.763 ಕೆ.ಜಿ.ತೂಕದ ಬೆಳ್ಳಿ ಹಾಗೂ 10.79 ಕೋಟಿ ರೂ. ಮೌಲ್ಯದ ವಿವಿಧ ಕೊಡುಗೆ ಸೇರಿದಂತೆ ಒಟ್ಟು 47.43 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿವೆ.

ಚುನಾವಣಾ ವೇಳಾಪಟ್ಟಿ ಘೋಷಣೆಗೂ ಮುನ್ನ 80 ಕೋಟಿ ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿತ್ತು.

ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳು, ಮದ್ಯದ ಪರವಾನಗಿ ನಿಯಮ ಉಲ್ಲಂಘನೆ ಅಡಿ 305 ಪ್ರಕರಣಗಳು, 16 ಎನ್ ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆಯಡಿ ಒಟ್ಟು 1,238 ಪಪ್ರಕಗಳನ್ನು ದಾಖಲಿಸಿದ,್ದು 270 ವಾಹನಗಳನ್ನು ಜಪ್ತಿ ಮಾಡಿದೆ. ಜಪ್ತಿ ಸಂಬಂಧ 316 ಎಫ್ ಐಆರ್ ದಾಖಲಾಗಿದೆ.