Friday, 13th December 2024

ವಿದ್ಯುತ್‌ ದರ: ಯೂನಿಟ್’ಗೆ 25 ರಿಂದ 30 ಪೈಸೆ ಹೆಚ್ಚಳ ?

ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಕೇಳಿ ಬರುತ್ತಿದ್ದ ವಿದ್ಯುತ್‌ ದರದಲ್ಲಿ ಹೆಚ್ಚಳದ ಕುರಿತಂತೆ ಸೋಮವಾರ  ಅಧಿಕೃತ ಆದೇಶ ಹೊರ ಬೀಳಲಿದೆ.

ಪ್ರಸಕ್ತ ಎಂದರೆ ೨೦೨೨-೨೩ ರ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಸಂಬಂಧಪಟ್ಟಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸೋಮವಾರ ಸಂಜೆ ಈ ಕುರಿತಂತೆ ಸುದ್ದಿಗೋಷ್ಠಿ ಕರೆದಿದೆ.

ಮೂಲಗಳ ಪ್ರಕಾರ, ವಿದ್ಯುಚ್ಛಕ್ತಿ ಪ್ರತಿ ಯೂನಿಟ್‌ ದರ ೨೫ ರಿಂದ ೩೦ ಪೈಸೆಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.