Saturday, 14th December 2024

ಶ್ರೀರೇವಣಸಿದ್ದೇಶ್ವರ ಏತನಿರಾವರಿ ಕ್ಯಾಬಿನೇಟ್ ಅನುಮೋದನೆ ಅಭಿನಂದನೆ: ಕಾಸುಗೌಡ ಬಿರಾದಾರ

ಇಂಡಿ: ತಾಲೂಕಿನ ಹೋರ್ತಿ ಭಾಗದ ಬಹುದಿನಗಳ ರೈತರ ಕನಸು ಇಡೀರಿಸಿದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿಯವರಿಗೆ ಈ ಭಾಗದ ರೈತರ ಪರವಾಗಿ ಅಭಿ ನಂದನೆ ಸಲ್ಲಿಸುವುದಾಗಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ತಿಳಿಸಿದ್ದಾರೆ.

ವಿಜಯಪೂರ ಜಿಲ್ಲೆಯ ಇಂಡಿ ಮತ್ತು ವಿಜಯಪೂರ ತಾಲೂಕಾಗಳ ನಾಗಠಾಣ ಮತಕ್ಷೇತ್ರ ಒಳಗೊಂಡAತೆ ೨೮,೦೦೦ ಸಾವಿರ ಹೆಕ್ಟರ್ ನೀರಾವರಿ ವಂಚಿತ ಪ್ರದೇಶಕ್ಕೆ ಆಲಿಮಟ್ಟಿ ಜಲಾಶೇಯದ ಹಿನ್ನೀರಿನಿಂದ ನಿರನ್ನು ಎತ್ತಿ ಸುಮಾರು ೫೬ ಹಳ್ಳಿಗಳ ಒಟ್ಟಾರೆ ೪೯,೭೩೦ ಹೆಕ್ಟರ್ ೧,೨೨,೮೮೫ ಎಕರೆ ಪ್ರದೇಶಕ್ಕೆ. ಹೋರ್ತಿ-ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯಡಿ ಪ್ರಸ್ತುತ ಆಲಿಮಟ್ಟಿ ಜಲಾಶೇಯದ ಹಿನ್ನಿರಿನಿಂದ ಪ್ರತ್ಯೆಕವಾಗಿ ೩.೨೪೫ ಟಿ.ಎಂ.ಸಿ ನೀರನ್ನು ಲಿಫ್ಟ್ ಮಾಡಿ ಪೈಪಲೈನ್ ಅಳವಡಿಕೆ ಯೊಂದಿಗೆ ಇಂಡಿ ,ವಿಜಯಪೂರ ತಾಲೂಕುಗಳ ೨೮೦೦೦ ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ರೂ.೨೬೩೮ ಕೋಟಿ ಅಂದಾಜು ಮೋತ್ತದ ಹೋರ್ತಿ -ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಮತ್ತು ಯೋಜನೆಯನ್ನು ೩ ಹಂತಗಳಲ್ಲಿ ಅನುಷ್ಠಾನಗೋಳಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿರುವುದಕ್ಕೆ ಹೃಯತುಂಬಿ ಅಭಿನಂದನೆ ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.