-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ವರ್ಷದಂತೆ ಈ ಸಾಲಿನಲ್ಲೂ ನಡೆದ ಜಿಲ್ಲಾ ಮಟ್ಟದ ಮಿಸ್, ಮಿಸ್ಟರ್, ಮಿಸೆಸ್, ಟೀನ್ ಶಿವಮೊಗ್ಗ, ಬ್ಯೂಟಿ ಪೇಜೆಂಟ್ (Fashion Pageant News), ಸ್ಥಳೀಯ ಫ್ಯಾಷನ್ ಪ್ರಿಯರನ್ನು ಸೆಳೆಯಿತು. ನಾನಾ ಕೆಟಗರಿಯಲ್ಲಿ ತೆರೆಕ್ಸ್ ವೆಂಚರ್ ಪ್ರಸ್ತುತಿಯಲ್ಲಿ ನಡೆದ ಈ ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸಿದ್ದವರ ಟ್ಯಾಲೆಂಟ್ ಅನಾವರಣಕ್ಕೆ ಈ ವೇದಿಕೆ ಸಹಕಾರಿಯಾಯಿತು. ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರ ಪಟ್ಟಿ ಹಾಗೂ ಪೇಜೆಂಟ್ ವಿವರ ಇಲ್ಲಿದೆ.
ಮಿಸ್ ಶಿವಮೊಗ್ಗ ಟೈಟಲ್ ವಿಜೇತರು
ಮಿಸ್ ಶಿವಮೊಗ್ಗ ಕೆಟಗರಿಯಲ್ಲಿ ಗಗನ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೇತರಾದರು. ಕ್ರಮವಾಗಿ ಫಸ್ಟ್ ರನ್ನರ್ ಅಪ್ ಸ್ನೇಹಾ, ಎರಡನೇ ರನ್ನರ್ ಅಪ್ ಮೇಘಾ ಶ್ರೀ ನಂತರದ ಟೈಟಲ್ ವಿಜೇತರಾದರು.
ಮಿಸ್ಟರ್ ಶಿವಮೊಗ್ಗ ವಿಜೇತರು
ಮಿಸ್ಟರ್ ಶಿವಮೊಗ್ಗ ಕೆಟಗರಿಯಲ್ಲಿ ವಿನಯ್ ಟೈಟಲ್ ಪಡೆದು ಮೊದಲ ಸ್ಥಾನ ಪಡೆದರು. ಇನ್ನು ಕ್ರಮವಾಗಿ, ಅಫಾನ್ ಅಹಮದ್ ಹಾಗೂ ತನ್ಮಯ್ ನಂತರದ ಟೈಟಲ್ ಪಡೆದರು.
ಮಿಸೆಸ್ ಶಿವಮೊಗ್ಗ ವಿಜೇತರು
ಮಿಸೆಸ್ ಶಿವಮೊಗ್ಗ ಟೈಟಲ್ ಹಾಗೂ ಕಿರೀಟವನ್ನು ಪವಿತ್ರಾ ಮುಡಿಗೇರಿಸಿಕೊಂಡರು. ಮೊದಲ ರನ್ನರ್ ಅಪ್ ಶಾರು, ಎರಡನೇ ರನ್ನರ್ ಅಪ್ ಸ್ಥಾನವನ್ನು ಶ್ರುತಿ ಪಡೆದರು.
ಟೀನ್ ಶಿವಮೊಗ್ಗ ಕೆಟಗರಿ ವಿಜೇತರು
ಟೀನ್ ಕೆಟಗರಿಯಲ್ಲಿ ಮೊದಲ ಟೈಟಲನ್ನು ಧವನ ಪಡೆದರು. ಇನ್ನು ಕ್ರಮವಾಗಿ ದಿಯಾ ಹಾಗೂ ಶುಭಮಂಗಲ ನಂತರದ ಸ್ಥಾನ ಪಡೆದರು.
ಕಿಡ್ಸ್ ಕೆಟಗರಿ ವಿಜೇತರು
ಮಹಾತಿ ಮೊದಲನೆಯ ಸ್ಥಾನ ಪಡೆದು ಟೈಟಲ್ ತಮ್ಮದಾಗಿಸಿಕೊಂಡರು. ಮೊದಲನೇ ರನ್ನರ್ ಅಪ್ ಆಗಿ ಸಾತ್ವಿಕ್, ಎರಡನೇ ರನ್ನರ್ ಅಪ್ ಆಗಿ ದೊರೆ ಹೀರೆಮಠ್ ವಿಜೇತರಾದರು.
ಈ ಸುದ್ದಿಯನ್ನೂ ಓದಿ | Fashion Pageant News: ಯುವ ಜನರ ಮನ ಗೆದ್ದ ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಪೇಜೆಂಟ್ 2024
ಪೇಜೆಂಟ್‌ನಲ್ಲಿ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಉತ್ಸಾಹ
ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಈ ಬ್ಯೂಟಿ ಪೇಜೆಂಟ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು, ಅಲ್ಲದೇ, ಜ್ಯೂರಿ ಸದಸ್ಯರಾಗಿಯೂ ಕೂಡ ಭಾಗವಹಿಸಿದ್ದರು. ಅವರೊಂದಿಗೆ ಸಹನಾ, ನಿಶಾಮ, ಅಖಿಲಾ ಪಾಲ್ಗೊಂಡಿದ್ದರು. ಆದರ್ಶ್ ಜೈನ್ ಶೋ ನೇತೃತ್ವದಲ್ಲಿ ಪೇಜೆಂಟ್ ಯಶಸ್ವಿಯಾಯಿತು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)