ಲಿಂಗಸುಗೂರು : ಜಿಲ್ಲೆಯ ರೈತನ ಕಣ್ಣಿರಿಗೆ ಬೆಲೆ ಇಲ್ಲದಂತಾಗಿದೆ. ಏಕೆಂದರೆ ಲಿಂಗಸು ಗೂರು ತಾಲ್ಲೂಕಿನ ತುಂಬಾ ಈಗಾಗಲೇ ಮಳೆಯಾಗಿದೆ ರೈತರು ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ನರ‍್ಮಾಣವಾಗಿದೆ ಕೃಷಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ರೈತರ ಕಣ್ಣೀರು ಒರೆಸುವ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತ ಮುಖಂಡ ಅಮರಣ್ಣ ಗುಡಿಹಾಳ ಇವರು ಶಾಸಕ ಡಿ ಎಸ್ ಹೂಲಗೇರಿ ಇವರ ಅಧ್ಯಕ್ಷತೆ ಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ರಸಗೊಬ್ಬರ ಮಾರಾಟ ಮಾಡುವ ಖಾಸಗಿ ಅಂಗಡಿಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವ ಮೂಲಕ ರೈತರ ರಕ್ತ ಹೀರುವೆ, ಮಾಲೀಕರು ರೈತರ ಜೋತೆ ಚಲ್ಲಾವಾಡು ತ್ತಿದ್ದಾರೆ ಎಂಬುದು ಸಾಬೀತಾಗಿದೆ ಇದರಿಂದ ರೈತರಿಗೆ ಬಹಳಷ್ಟು ತೊಂದರೆ ಅನುಭವಿಸು ವಂತಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಕಂಡುಬಂದಿದು ಕೂಡಲೇ ಅಧಿಕಾರಿ ಗಳು ಎಚ್ಚೆತ್ತುಕೊಂಡು ರಸಗೊಬ್ಬರ ಪುರೈಕೆ ಮಾಡಬೇಕು ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ನ್ಯಾಯಯುತ ನಿಗದಿ ಪಡಿಸಿದ ದರದಲ್ಲಿ ಪುರೈಕೆ ಮಾಡಬೇಕು ಎಂದು ರೈತ ಸಂಘದ ಹಸಿರು ಸೇನೆ ಮುಖಂಡ ಅಮರಣ್ಣ ಗುಡಿಹಾಳ ಇವರು ಶಾಸಕರ ಕೆಡಿಪಿ ಸಭೆಯಲ್ಲಿ ಡಿ ಎಸ್ ಹೂಲಗೇರಿ ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಇವರಿಗೆ ಆಗ್ರಹಿಸಿದರು.