Saturday, 12th October 2024

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್​ ಪಾಸ್​ ವಿತರಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್​ ಪಾಸ್​ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ ಮೀಸಲು ಇರಿಸಲಾಗಿದೆ.

ಜತೆಗೆ ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭಿಸಲಾಗಿದೆ.

ಹುಬ್ಬಳ್ಳಿ ಮತ್ತು ದಾವಣಗೆರೆ ಇಎಸ್​ಐ ಆಸ್ಪತ್ರೆಗಳ ಬೆಡ್ 100ಕ್ಕೆ ಹೆಚ್ಚಳ ಯೆಲ್ಲೊ ಬೋರ್ಡ್‌ ಡ್ರೈವರ್ ಮಕ್ಕಳಿಗಾಗಿ ವಿದ್ಯಾನಿಧಿ ಸ್ಕೀಮ್ ಹಾಗೂ ಡ್ರೈವರ್ಸ್‌ ಮಕ್ಕಳ ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ.