Thursday, 3rd October 2024

ಫೋಟಿಸ್‌ ಆಸ್ಪತ್ರೆ ವತಿಯಿಂದ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ದಿನದ ಪ್ರಯುಕ್ತ ಫೋಟಿಸ್‌ ಆಸ್ಪತ್ರೆ ವತಿಯಿಂದ ಇಂದು ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ವಿಜಯನಗರದ ರಾಜ್‌ಕುಮಾರ ಪಾಕ್‌, ಕೆ.ಆರ್‌. ಪುರಂನ ಚಿಕ್ಕದೇವಸಂದ್ರ ಸಮುದಾಯ ಭವನದಲ್ಲಿ ೨೫೦ಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ, ಇಸಿಜಿ, ರಕ್ತದೊತ್ತಡ, ಬಿಎಂಐ ಪರೀಕ್ಷಿಸಲಾಯಿತು.