Friday, 13th December 2024

ಗಣೇಶ ಚತುರ್ಥಿ ಹಬ್ಬದಂದು ಗಣೇಶನ ಹೆಸರಿರುವ 100 ಜನರಿಗೆ ಉಚಿತ ಪ್ರವೇಶ

ಬೆಂಗಳೂರು: ಭಾರತದ ಅತಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಿದೆ.

ಗಣೇಶನ 108 ಹೆಸರುಗಳಲ್ಲಿ ನಿಮ್ಮ ಹೆಸರುಗಳಲ್ಲಿ ನಿಮ್ಮ ಹೆಸರೂ ಒಂದಾಗಿದ್ದರೆ, ನೀವು ಆಗಸ್ಟ್ 31 ರಂದು ವಂಡರ್‌ ಲಾ ಪಾರ್ಕ್‌ಗೆ ಉಚಿತ ಪ್ರವೇಶ ಪಡೆಯಬಹುದು.

ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ವಂಡರ್‌ಲಾ ಪಾರ್ಕ್‌ಗಳಾದ್ಯಂತ ಮೊದಲ 100 ಆಫ್‌ಲೈನ್ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯವಾಗಲಿದೆ. ಈ ಆಫರ್‌ ಪಡೆಯಲು ಇಚ್ಛಿಸುವವರು ವಂಡರ್‌ಲಾಗೆ ಭೇಟಿ ನೀಡುವ ವೇಳೆ ಯಾವುದಾದ ರೊಂದು ಗುರುತಿನ ಚೀಟಿ ತಂದಿರುವುದು ಕಡ್ಡಾಯವಾಗಿದೆ.

ಹೆಚ್ಚಿನ ವಿವರಗಳು ಮತ್ತು ಬುಕಿಂಗ್‌ಗಾಗಿ ವಂಡರ್‌ಲಾ ವೆಬ್‌ಸೈಟ್ ಅನ್ನು ಪರಿಶೀಲಿಸಿ: https://www.wonderla.com/, ಅಥವಾ ಇಲ್ಲಿಗೆ ಸಂಪರ್ಕಿಸಿ: ಬೆಂಗಳೂರು – 080 37230333, 080 35073966.