Saturday, 14th December 2024

ಭವ್ಯವಾಗಿ ನಡೆದ ಹಿಂದು ಮಹಾಗಣಪತಿ ವಿಸರ್ಜನೆ

ಕೊಲ್ಹಾರ: ಪಟ್ಟಣದ ವಿಷ್ಣು ಸೇನಾ ಸಮಿತಿಯ ಹಿಂದು ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಪ್ರತಿವರ್ಷ ೧೧ ದಿನಗಳ ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದ ವಿಸರ್ಜಿಸಲಾಗುತ್ತದೆ ಅದರಂತೆ ಶನಿವಾರ ಅತ್ಯಂತ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಣೇಶನನ್ನು ವಿಸರ್ಜಿಸಲಾಯಿತು. ಭವ್ಯ ಮೆರವಣಿಗೆಯಲ್ಲಿ ಭಾರತ ಮಾತೆಯ ಭಾವಚಿತ್ರ, ಮೇರುನಟ ದಿ ಡಾ.ವಿಷ್ಣುರ್ವಧನ್ ಅವರ ಭಾವ ಚಿತ್ರ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು.

ಈ ಭವ್ಯವಾದ ಮೆರವಣಿಗೆಯಲ್ಲಿ ಗಜಾನನ ಪ್ರತಿರೂಪನಾದ ಆಲಕನೂರಿನ ಆನೆ, ರನ್ನ ಬೆಳಗಲಿಯ ಜಾಂಜ್ ನೃತ್ಯ, ಆಲಮೇಲದ ರೈತನ ಪ್ರತಿರೂಪದ ಸ್ಥಬ್ದ ಚಿತ್ರಗಳು, ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡದ ಗೊಂಬೆಗಳು, ಚಿಕ್ಕಮಂಗಳೂರಿನ ಲಿಂಗದ ಹಳ್ಳಿಯ ಭದ್ರಕಾಳಿ ನೃತ್ಯ, ವೀರಗಾಸೆ, ನಂದಿಕೋಲು ಕುಣಿತ, ಅಥಣಿ ತಾಲೂಕಿನ ಬ್ಯಾಂಜೋ ಸೆಟ್ ಹಾಗೂ ಮದ್ದುಗಳಿಂದ ಕೂಡಿದ ಭವ್ಯ ಮೆರವಣಿಗೆ ಅತ್ಯಂತ ಆಕರ್ಷಣಿ ಯವಾಗಿತ್ತು. ಮೆರವಣಿಗೆ ವೀಕ್ಷಿಸಲು ಜಿಲ್ಲೆಯಿಂದ ಸಾವಿರಾರು ಜನರು ಆಗಮಿಸಿದ್ದರು, ಒಟ್ಟಾರೆ ಅತ್ಯಂತ ಅದ್ಧೂರಿಯಾಗಿ ಹಿಂದು ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ಜರುಗಿತು.