Friday, 13th December 2024

ಸುತ್ತಲಿನ ವಾತಾವರಣ ಸುಂದರಕ್ಕೆ ಗಿಡಮರಗಳು ಬೆಳೆಸಿ: ಗಂಗಾ ಗಲಗಲಿ

ಇಂಡಿ: ಇಂದು ವಿಶ್ವ ಪರಿಸರ ದಿನವನ್ನು ಸಾಯಿ ಪಬ್ಲಿಕ ಶಾಲೆಯ ಆವರಣದಲ್ಲಿ ಕದಳಿ ವೇದಿಕೆಯ ಅಧ್ಯಕ್ಷ ಶ್ರೀಮತಿ ಗಂಗಾ ಗಲಗಲಿ ಹಾಗೂ ಪದಾಧಿಕಾರಿಗಳು ಸಸಿ ನೇಡುವ ಮೂಲಕ ಪರಿಸರ ದಿನಾಚರಣೆ ಆಚರಿಸ ಲಾಯಿತು.

ನಮ್ಮ ಸುತ್ತಮುತ್ತಲಿನ ವಾತಾರವಣ ಸುಂದರವಾಗಿರಬೇಕಾದರೆ ಗಿಡಮರಗಳನ್ನು ಬೆಳೆಸಬೇಕು, ಹಸಿರೇ ಉಸಿರು ವಿಶ್ವ ಪರಿಸರ ದಿನಾಚರಣೆ ಉದ್ದೇಶ ಕೇವಲ ಆಚರಣೆ ಮಾಡಿದರೆ ಸಾಲದು ಪ್ರತಿಯೋಬ್ಬ ನಾಗರೀಕರು ಪರಿಸರದ ಬಗ್ಗೆ ಪ್ರಜ್ಞೆ ಬೆಳೆಸಿಕೊಂಡು ಜಾಗೃತರಾಗುವ ಉದ್ದೇವಾಗಿದೆ. ಇಂದು ಮನುಷ್ಯ ತನ್ನ ಅಶೇ ಆಮೀಶೇಗಳಿಗಾಗಿ ಇಡೀ ಪರಿಸರ ಹಾಳು ಮಾಡಿದ್ದಾನೆ. ಗಿಡಮರಗಳನ್ನು ಕಡಿದು ಕಾಂಕ್ರೀಟ್ ಮಾಡಿದ್ದಾರೆ.

ಮಳೆಯ ನೀರು ಇಂದು ಭೂಮಿಯಲ್ಲಿ ಇಂಗಿ ಅಂತರ್ಜಲಮಟ್ಟ ಕುಸಿಯಲು ಇದೇ ಕಾರಣ ಪ್ರತಿ ವರ್ಷ ಅತೀ ವೃಷ್ಠಿ ಅನಾವೃಷ್ಠಿಗಳಿಗೆ ಜನರು ಮಾಡಿದ ಪ್ರಮಾದಗಳೆ ನೇರ ಕಾರಣ , ಕರೋನಾ ಸಂಧರ್ಬ ಮನುಷ್ಯನಿಗೆ ಒಂದು ನೀತಿ ಪಾಠ ಎಷ್ಠೋ ಜನರಿಗೆ ಶುದ್ದ ಗಾಳಿ ಇಲ್ಲದೆ ಸಾವುಗಳು ಸಂಭವಿಸಿವೆ ಗಾಳಿ ಮನುಷ್ಯನಿಗೆ ಬಹಳ ಮುಖ್ಯ ಗಾಳಿ ಇರಬೇಕಾದರೆ ಗಿಡಮರಗಳು ಅವಶ್ಯ ಗಿಡಮರಗಳು ಇಂಗಾಲ ಡೈ ಆಕ್ಸೆöÊಡ್ ಸೇವಿಸಿ ಮನುಷ್ಯನಿಗೆ ಪ್ರಾಣ ವಾಯು ಕೊಡುತ್ತವೆ. ಇದಲ್ಲದೆ ಗಿಡಮರಗಳು ಮಳೆಯ ಬ್ಯಾಂಕರಗಳಿದ್ದ0ತೆ ಆದ್ದರಿಂದ ಮನೆಗೊಂದು ಮರ ಮನೆಗೊಂದು ಮಗು ಎಂಬ ಸಂದೇಶ ಮರೆಯ ಬಾರದು ಎಂದು ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಗಲಗಲಿ ಹೇಳಿದರು.

ವಿಜಯಲಕ್ಷಿö್ಮÃ ದೇಸಾಯಿ, ರಾಜಶ್ರೀ ಕ್ಷತ್ರಿ, ಶಶೀಕಲಾ ಮದಭಾವಿ, ಸುಮಂಗಲಾ ನಿಂಬಾಳ, ಧಾನಮ್ಮಾ ಹಿರೇಮಠ, ನಿರ್ಮಲಾ ತೇಲಿ, ಭವಾನಿ ಗುಳೇದಗುಡ್ಡ, ರೇಣುಕಾ ಸಂಖ, ಜಯಶ್ರೀಬಿರಾದಾರ, ಶಶೀಲಕಲಾ ಬೆಟಗೇರಿ, ಬಸಮ್ಮಾ ಪೊಲೀಸಪಾಟೀಲ, ಸಂಗೀತಾ ಡೋಳ್ಳಿನ ಸೇರಿದಂತೆ ಅನೇಕ ಪದಾಧಿಕಾರಿಗಳು ಇದ್ದರು.