Friday, 29th November 2024

ಕಾಗದಕ್ಕಷ್ಟೇ ಸೀಮಿತವಾದ ಉದ್ಯಾನಗಳು

ಮುದ್ದೇಬಿಹಾಳದಲ್ಲಿ ಕಾಗದದಲ್ಲಷ್ಟೇ ಇವೆ 40 ಉದ್ಯಾನಗಳು

ಜನಪ್ರತಿನಿಧಿ, ಅಧಿಕಾರಿಗಳ ಜಾಣ ಮೌನ

ವಿಶೇಷ ವರದಿ: ಬಸವರಾಜ ಹುಲಗಣ್ಣಿ

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಕೆಲವು ವರ್ಷಗಳಿಂದ ಅವ್ಯವಹಾರ ಒಂದು ನಿರಂತರವಾಗಿ ನಡೆಯುತ್ತಾ ಬರುತ್ತಿದೆ.

ಅದು ಯಾವುದೊ ಪ್ರತಿ ವರ್ಷ ಜರುಗುವ ಸರಕಾರಿ ಯೋಜನೆಗಳಲ್ಲಿನ ಲೋಪದೋಷವಿದ್ದರೆ ನಾಗರಿಕರೂ ಅಷ್ಟು ತಲೆ ಕೆಡಿಸಿ ಕೋಳ್ಳುತ್ತಿರಲಿಲ್ಲ. ಪಟ್ಟಣ ಸುಂದರ ಹಾಗೂ ಸ್ವಚ್ಛವಾಗಿರಬೇಕಾದರೆ ಉದ್ಯಾನಗಳು ಮಹತ್ತರವಾದ ಪಾತ್ರವಹಿಸುತ್ತಿವೆ. ಆದರೆ ಕಾಗದದಲ್ಲಿಯೆ 40 ಉದ್ಯಾನಗಳನ್ನು ಮಾಡಿರುವ ಪುರಸಭೆ ಅಧಿಕಾರಿಗಳು ನೋಡಲು ಎರಡು ಉದ್ಯಾನ ಮಾಡಿ,
ಉಳಿದದ್ದು ಕಾಗದದಲ್ಲಿಯೆ ಹೂದೋಟ ಕಟ್ಟಿದ್ದಾರೆ.

40 ಉದ್ಯಾನಗಳನ್ನು ತೋರಿಸಿ ಪುರಸಭೆ ಅಧಿಕಾರಿಗಳೆ ಎನ್ನುವ ನಾಗರಿಕರ ಪ್ರಶ್ನೇಗೆ ಅಧಿಕಾರಿಗಳೆ ಉತ್ತರಿಸಬೇಕಿದೆ. ಬೆಸಿಗೆ ಪ್ರಾರಂಬವಾಗುತ್ತಿದೆ. ಪಟ್ಟಣದ ಜನತೆ ತಂಪಾದ ಗಾಳಿಯಲ್ಲಿ ಕೆಲಹೋತ್ತು ಕಾಲ ಕಳೆಯಲು ಪಟ್ಟಣದಲ್ಲಿ ಯಾವುದಾದರು
ಉದ್ಯಾನವನಕ್ಕೆ ಹೋಗೋನಾ ಎಂದರೆ ಹುಡ್ಕೋ ಮತ್ತು ಮಾರುತಿ ನಗರದಲ್ಲಿ ಉದ್ಯಾನವನಗಳಿವೆ. ನಾಗರಿಕರು ಇವೆ ಉದ್ಯಾ
ನವನಗಳು ಮತ್ತೆ ಇಲ್ಲ ಎಂದು ಸುಮ್ಮನಾಗಬಹುದು. ಆದರೆ ಈ ಉದ್ಯಾನವನಗಳ ಹಿಂದಿನ ರೋಚಕ ಕಥೆ ಕೇಳಿದರೆ ನಾಗರಿಕರು ಬೆಚ್ಚಿ ಬಿಳುವುದಂತು ಸತ್ಯ. ಎಕೆಂದರೆ ಪುರಸಭೆ ದಾಖಲೆಗಳ ಪ್ರಕಾರ ಪಟ್ಟಣದಲ್ಲಿ 40 ಉದ್ಯಾನವನಗಳಿವೆ. ಸ್ವಲ್ಪ ಉಸಿರು ಬಿಗಿ ಹಿಡಿದು ಪಟ್ಟಣದಲ್ಲಿ ಎಲ್ಲೆಲ್ಲಿ ಉದ್ಯಾನವನಗಳಿವೆ ಎನ್ನುವ ಸತ್ಯ ತಿಳಿದುಕೊಳ್ಳಿ.

ಪುರಸಭೆ ದಾಖಲೆಗಳ ಪ್ರಕಾರ ವಿದ್ಯಾನಗರ, ಮಾರುತಿ ನಗರ ಉದ್ಯಾನವನ ಜಾಗವಿದೆ. ಆದರೆ ಸರ್ವೆ ನಂಬರ್‌ನಲ್ಲಿ ಹುಡುಕಾಡಿ ದರೆ ನಿಮಗೆ ಒಂದು ಗಾರ್ಡನ್ ಸಿಗುವುದಿಲ್ಲ. ಆದರೆ ಮಾರುತಿ ನಗರದಲ್ಲಿ ಕೇವಲ ಎರಡು ಉದ್ಯಾನವನಗಳಿವೆ. ಉಳಿದಂತೆ ಪಟ್ಟಣದ ಗಣೇಶ ನಗರದ 78/2, ಹಡಲಗೇರಿಯ 78/ಅ, ಪೀಲೆಕ್ಕೆಮ್ಮ ನಗರದ 77/2, ಬಸವ ನಗರದ 62/2 ಸರ್ವೆ ನಂಬರನಲ್ಲಿ ಉದ್ಯಾನವನದ ಜಾಗವಿದೆ. ಆದರೆ ಸದರಿ ಜಾಗಗಳಲ್ಲಿಯು ಉದ್ಯಾನವನ ಇಲ್ಲ.

ಸರಕಾರಿ ದಾಖಲೆಗಳನ್ನು ಹೋರತುಪಡಿಸಿ ಕಳೆದ ಹತ್ತು ವರ್ಷಗಳ ಹಿಂದೆ ಪುರಸಭೆ ಹಿಂದುಗಡೆ ಒಂದು ಸುಂದರವಾದ ಉದ್ಯಾನವನವಿತ್ತು. ಕಾಲಕಳೆದಂತೆ ಪುರಸಭೆಯವರಿಗೆ ಏನಾಯಿತೋ ಎನೋ ಗೋತ್ತಿಲ್ಲ ಸದರಿ ಗಾರ್ಡನ್ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡು, ಇಂದು ಈ ಜಾಗದಲ್ಲಿ ಗಾರ್ಡನ್ ಇತ್ತು ಎನ್ನುವ ಯಾವುದೇ ಕುರುಹು ಬಿಡದೆ ಕೆಲವರು ಗಾರ್ಡನ್ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ.

ಸದರಿ ಗಾರ್ಡನ್ ಜಾಗವನ್ನು ಮೋದಲಿನಿಂದಲು ಪಟ್ಟಣದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಾ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಸದರಿ ಗಾರ್ಡನ್ ಜಾಗದಲ್ಲಿ ಒಬ್ಬರು ಮನೆ ಕಟ್ಟಿಸಿದ್ದರು. ಆಗ ಪುರಸಭೆಗೆ ಒಬ್ಬ ಖಡಕ್ ಅಧಿಕಾರಿಯೋಬ್ಬರು ಬಂದು ಸದರಿ ಕಟ್ಟಡವನ್ನು ತೆರವುಗೋಳಿಸಿದ್ದರು. ಆದರೆ ಮತ್ತೆ ಗಾರ್ಡನ್ ನಿರ್ಮಾಣ ಮಾಡದೆ ಇರುವುದರಿಂದ ಸದರಿ ಗಾರ್ಡನ್ ಜಾಗವು ಅತಿಕ್ರಮಣಕ್ಕೆ ಒಳಗಾಗಿದೆ.

ಪಟ್ಟಣದಲ್ಲಿ ಅತಿಕ್ರಮಣಕ್ಕೋಳಗಾಗಿ ಉದ್ಯಾನವನಗಳನ್ನು ಮರಳಿ ವಶಕ್ಕೆ ಪಡೆದು, ಸುಧಾರಣೆಗೆ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ. ಸಾವಿರಾರು ರು.ಗಳನ್ನು ಟ್ಯಾಕ್ಸ್‌ ವಸೂಲಿ ಮಾಡುವ ಪುರಸಭೆ, ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಪಟ್ಟಣದಲ್ಲಿ ಅತಿಕ್ರಮಣವಾಗಿರುವ ಉದ್ಯಾನವನ ಜಾಗವನ್ನು ತೆರವುಗೋಳಿಸಿ, ಉದ್ಯಾನವನದ ಜಾಗಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡ ತೆರವುಗೊಳಿಸುವುದು ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕು. ಈ ಬಗ್ಗೆೆ ಗಮನ ಹರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಬೇಕು. ಸೂಚಿಸುವುದಷ್ಟೇ ಅಲ್ಲದೇ ಕೆಲಸ ಆರಂಭಗೊಳ್ಳುವಂತೆಯೂ ಮಾಡಬೇಕು ಎಂಬುದು ಪಟ್ಟಣದ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

***

ಪರಿಸರ, ಅರಣ್ಯ ರಕ್ಷಣೆ ಗಿಡಗಳನ್ನು ಬೆಳೆಸುವ ಕುರಿತು ಪಟ್ಟಣದ ಸಾರ್ವಜನಿಕರಲ್ಲಿ ಕಾಳಜಿ ಇದ್ದರು, ಯಾವುದೇ ಇಲಾಖೆ ಪ್ರೋತ್ಸಾಹ ನೀಡುವುದಿಲ್ಲ. ಪಟ್ಟಣದ ಕೆಲವು ಸರಕಾರಿ ಕಚೇರಿಗಳ ಆವರಣದಲ್ಲಿ ಅರಣ್ಯ ಇಲಾಖೆ ಮರಗಳನ್ನು ಬೆಳೆಸುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ 40 ಉದ್ಯಾನವನಗಳಿದ್ದರು, ಅಧಿಕಾರಿಗಳು ಈ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವಲ್ಲಿ
ಹಿಂದೆಟು ಹಾಕುತ್ತಿರುವುದು ಯಾಕೆ.? ಕೂಡಲೆ ಈ ಕುರಿತು ಅಧಿಕಾರಿಗಳು ಜನಪ್ರತಿ ನಿಧಿಗಳು ಮೌನವಹಿಸದೆ  ಕಾರ್ಯಪ್ರವೃತ್ತ ರಾಗಬೇಕು. ಪಟ್ಟಣದ ಹಸಿರಿಕರಣಕ್ಕೆ ಮುಂದಾಗಬೇಕು.
-ಸದ್ದಾಂ ಕುಂಟೋಜಿ ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ