Wednesday, 11th December 2024

Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಲ್ಲಿದೆ ಇಂದಿನ ಬೆಲೆ ವಿವರ

Gold Price Today

ಬೆಂಗಳೂರು: ಕೆಲವು ದಿನಗಳಿಂದ ಸತತವಾಗಿ ಕಡಿಮೆ ಶನಿವಾರ ಏಕಾಏಕಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಅಕ್ಟೋಬರ್‌ 13) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,120 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,767 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 56,960 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,200 ರೂ. ಮತ್ತು 100 ಗ್ರಾಂಗೆ
7,12,000 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,136 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 77,670 ರೂ. ಮತ್ತು 100 ಗ್ರಾಂಗೆ 7,76,700 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
 ಬೆಂಗಳೂರು7,120 ರೂ.7,767 ರೂ
 ದೆಹಲಿ7,135 ರೂ.7,782 ರೂ.
 ಮುಂಬೈ7,120 ರೂ.7,767 ರೂ.
 ಚೆನ್ನೈ7,120 ರೂ.7,767 ರೂ.
 ಹೈದರಾಬಾದ್7,120 ರೂ.7,767 ರೂ.

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಬೆಳ್ಳಿ 1 ಗ್ರಾಂನ ಬೆಲೆ 93.50 ರೂ.ಗೆ ತಲುಪಿದೆ. 8 ಗ್ರಾಂಗೆ 748 ರೂ., 10 ಗ್ರಾಂಗೆ 935 ರೂ. ಮತ್ತು 1 ಕೆಜಿಗೆ 93,500 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು

ಶತಮಾನಗಳಿಂದ ಚಿನ್ನವು ಭಾರತೀಯ ಸಂಸ್ಕೃತಿ ಮತ್ತು ಅರ್ಥಶಾಸ್ತ್ರದ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದೆ. ದೇಶದಲ್ಲಿ ಆಭರಣವಾಗಿ ಮಾತ್ರವಲ್ಲ ಹೂಡಿಕೆಗೂ ಚಿನ್ನ ಬಳಕೆಯಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತದೆ. ಅದಕ್ಕೆ ಕಾರಣವೇನು? ಚಿನ್ನದ ದರದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಎನ್ನುವ ವಿವರ ಇಲ್ಲಿದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವ: ಜಾಗತಿಕ ಚಿನ್ನದ ಮಾರುಕಟ್ಟೆಯ ಏರಿಳಿತ ಭಾರತದಲ್ಲಿ ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರದಾನ ಪಾತ್ರವಹಿಸುತ್ತದೆ. ಭೌಗೋಳಿಕ ರಾಜಕೀಯ ಘಟನೆಗಳು, ಆರ್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳಂತಹ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅನಿಶ್ಚಿತತೆಗೆ ಒಳಗಾದಾಗ ಹೂಡಿಕೆದಾರರು ಹೆಚ್ಚಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಬೇಡಿಕೆ ಮತ್ತು ಪೂರೈಕೆ: ಭಾರತದಲ್ಲಿ ಚಿನ್ನವು ಅಮೂಲ್ಯ ಲೋಹ ಮಾತ್ರವಲ್ಲ ಸಂಸ್ಕೃತಿಯ ಸಂಕೇತವೂ ಹೌದು. ಹೀಗಾಗಿ ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರದ ಏರಿಳಿತಗಳಿಗೆ ಕಾರಣವಾಗುತ್ತದೆ. ಜತೆಗೆ ಪೂರೈಕೆಯಲ್ಲಿನ ಅಡೆತಡೆಗಳು ಮತ್ತು ಆಮದು ಸುಂಕದಲ್ಲಿನ ಬದಲಾವಣೆಗಳು ಸ್ಥಳೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಸರ್ಕಾರದ ನೀತಿ: ಸರ್ಕಾರದ ನೀತಿಗಳು ಭಾರತದ ಚಿನ್ನದ ದರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆಮದು ಸುಂಕಗಳು, ತೆರಿಗೆಗಳು ಮತ್ತು ಚಿನ್ನದ ಆಮದಿನ ಮೇಲಿನ ನಿರ್ಬಂಧಗಳಲ್ಲಿನ ಬದಲಾವಣೆಗಳು ಏರಿಳಿತಗಳಿಗೆ ಕಾರಣವಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ.

ವಿನಿಮಯ ದರಗಳು: ಜಾಗತಿಕವಾಗಿ ಚಿನ್ನದ ಬೆಲೆ ಯುಎಸ್ ಡಾಲರ್‌ಗಳಲ್ಲಿರುವುದರಿಂದ ಭಾರತೀಯ ರೂಪಾಯಿ-ಯುಎಸ್ ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು ಭಾರತದಲ್ಲಿ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಅಂಶ. ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ಹೂಡಿಕೆದಾರರ ಮನಸ್ಥಿತಿ: ಚಿನ್ನದ ಮೇಲಿನ ಹೂಡಿಕೆಯೂ ಬೆಲೆಯನ್ನು ಪ್ರಭಾವಿಸುವ ಇನ್ನೊಂದು ಅಂಶ. ವ್ಯಾಪಾರ ಪ್ರಮಾಣಗಳು ಮತ್ತು ಇತರ ಹಣಕಾಸು ಮಾರುಕಟ್ಟೆಗಳಲ್ಲಿನ ಪ್ರವೃತ್ತಿಗಳು ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ.

ಈ ಸುದ್ದಿಯನ್ನೂ ಓದಿ: Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ