Monday, 14th October 2024

Golden Saree Fashion: ಗೋಲ್ಡನ್‌ ಸೀರೆಯಲ್ಲಿ ಸೆಲೆಬ್ರಿಟಿಯಂತೆ ಕಾಣಿಸಲು 5 ಸಿಂಪಲ್‌ ಐಡಿಯಾಗಳಿವು!

Golden saree fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೆಲೆಬ್ರಿಟಿ ಲುಕ್‌ (Celebrity Look) ನೀಡುವ ಡಿಸೈನರ್‌ ಗೋಲ್ಡನ್‌ ಸೀರೆಗಳು ಟ್ರೆಂಡಿಯಾಗಿವೆ. ಹಾಗೆಂದು, ಎಲ್ಲಾ ಗೋಲ್ಡನ್‌ ಸೀರೆಗಳು ಸೆಲೆಬ್ರೆಟಿ ಲುಕ್‌ ನೀಡುವುದಿಲ್ಲ. ಸೂಕ್ತವಾದ ಸೀರೆಯ ಆಯ್ಕೆ ಹಾಗೂ ಸ್ಟೈಲಿಂಗ್‌ ಸಾಮಾನ್ಯ ಮಹಿಳೆಯರನ್ನು ಸೆಲೆಬ್ರಿಟಿಯಂತೆ ಬಿಂಬಿಸಬಹುದು. ಹಾಗಾಗಿ ಗೋಲ್ಡನ್‌ ಸೀರೆಗಳಲ್ಲಿ (Golden Saree Fashion) ಆಕರ್ಷಕವಾಗಿ ಕಾಣಿಸಲು ಬಯಸುವವರು ಆಯ್ಕೆ ಹಾಗೂ ಸ್ಟೈಲಿಂಗ್‌ನಲ್ಲಿ ಜಾಣತನ ತೋರಬೇಕು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ದಿಶಾ. ಅವರು ನೀಡಿರುವ ಸಿಂಪಲ್‌ ಸಲಹೆಗಳು ಇಲ್ಲಿವೆ.

ಟ್ರೆಂಡಿ ಗೋಲ್ಡನ್‌ ಸೀರೆ ಆಯ್ಕೆ ಮಾಡಿ

ಸಾಟಿನ್‌, ಟಿಶ್ಯೂ, ಅರ್ಗಾನ್ಜಾ, ಸಿಕ್ವೀನ್ಸ್, ಶಿಮ್ಮರ್‌, ಕ್ರಶ್‌, ಎಂಬಾಲಿಶ್ಡ್, ಎಂಬ್ರಾಯ್ಡರಿ, ನೆಟ್ಟೆಡ್‌, ಜಾರ್ಜೆಟ್, ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆದರೆ, ನೀವು ಸೆಲೆಬ್ರಿಟಿಗಳು ಉಡುವ ಟ್ರೆಂಡಿಯಾಗಿರುವ ಸೀರೆಯ ಆಯ್ಕೆ ಮಾಡಿದಲ್ಲಿ, ನೀವು ಸೆಲೆಬ್ರೆಟಿಯಂತೆ ಕಾಣಬಹುದು.

ಮೃಣಾಲ್‌ ಠಾಕೂರ್‌, ನಟಿ

ಪರ್ಸನಾಲಿಟಿಗೆ ತಕ್ಕಂತೆ ಫ್ಯಾಬ್ರಿಕ್‌ ಆಯ್ಕೆ

ನೀವು ಪ್ಲಂಪಿಯಾಗಿದ್ದಲ್ಲಿ ಸಾಫ್ಟ್ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವಂತಹ ಗೋಲ್ಡನ್‌ ಸೀರೆ ಆಯ್ಕೆ ಮಾಡಿ. ಆಗ ಬಳುಕುವ ಬಳ್ಳಿಯಂತೆ ಕಾಣಿಸಬಹುದು. ತೆಳ್ಳಗಿದ್ದಲ್ಲಿ ಯಾವುದಾದರೂ ಸರಿಯೇ ಕೊಳ್ಳಿ. ಹವರ್‌ ಗ್ಲಾಸ್‌ ಬಾಡಿ ಶೇಪ್‌ನವರು ಕೂಡ ಆದಷ್ಟೂ ಫ್ಲೋ ಆಗುವಂತಹ ಸೀರೆ ಖರೀದಿಸಬೇಕು.

ಈ ಸುದ್ದಿಯನ್ನೂ ಓದಿ | London Fashion Week 2024: ಲಂಡನ್‌ ಫ್ಯಾಷನ್‌ ವೀಕ್‌‌‌ನಲ್ಲಿ ಹೈಲೈಟಾದ ಹೈ ಸ್ಟ್ರೀಟ್‌ ಫ್ಯಾಷನ್‌!

ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೇಡ್‌ ಆಯ್ಕೆ

ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ಗೋಲ್ಡನ್‌ ಶೇಡ್ಸ್ ಆಯ್ಕೆ ಮಾಡಿ. ಉದಾಹರಣೆಗೆ., ಲೈಟ್‌ ಗೋಲ್ಡ್ ಯಾವ ಬಗೆಯ ಸ್ಕಿನ್‌ ಟೋನ್‌ನವರಿಗಾದರೂ ಹೊಂದುತ್ತದೆ. ಡಾರ್ಕ್‌ ಸ್ಕಿನ್‌ ಟೋನ್‌ನವರು ಒಮ್ಮೆ, ಮೈ ಮೇಲೆ ಹಾಕಿ ಮುಖಕ್ಕೆ ಈ ಬಣ್ಣ ಹೊಂದುವುದೇ ಅಥವಾ ಇನ್ನಷ್ಟು ಡಾರ್ಕ್ ಅಥವಾ ಕಾಪರ್‌ ಗೋಲ್ಡ್, ರೋಸ್‌ ಗೋಲ್ಡ್ ಆಯ್ಕೆ ಮಾಡಬೇಕಾ ಎಂಬುದನ್ನು ಯೋಚಿಸಿ ಕೊಳ್ಳಿ.

ಕಾಂಟ್ರಸ್ಟ್ ಅಥವಾ ಮಾನೋಕ್ರೋಮ್‌ ಬ್ಲೌಸ್‌

ಗೋಲ್ಡನ್‌ ಸೀರೆಯನ್ನು ಎರಡು ಬಗೆಯಲ್ಲಿ ಉಡಬಹುದು. ಸೇಮ್‌ ಕಲರ್‌ನ ಬ್ಲೌಸ್‌ನೊಂದಿಗೂ ಧರಿಸಬಹುದು. ಪಾರ್ಟಿವೇರ್‌ ಸೀರೆಯಾದಲ್ಲಿ ಡಿಫರೆಂಟ್‌ ಲುಕ್‌ ನೀಡಲು ಬ್ಲಾಕ್‌, ವೆಲ್ವೆಟ್‌, ಸ್ಲಿವ್‌ಲೆಸ್‌, ಹಾಲ್ಟರ್‌ ನೆಕ್‌, ಬಿಕಿನಿ ಬ್ಲೌಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ ಧರಿಸಬಹುದು. ಇದು ಗ್ಲಾಮರಸ್‌ ಲುಕ್‌ ನೀಡುವುದು.

ಈ ಸುದ್ದಿಯನ್ನೂ ಓದಿ | Foreign Tour: ಒಂದು ಲಕ್ಷ ರೂ. ಇದ್ದರೆ ಸಾಕು, ಫಾರಿನ್ ಟೂರ್ ಮಾಡಬಹುದು!

ಬಾರ್ಡರ್‌ಲೆಸ್‌ ಗೋಲ್ಡನ್‌ ಸೀರೆ

ಸಮಾರಂಭ ಅಥವಾ ಕಾರ್ಯಕ್ರಮಗಳಿಗೆ ಬಾರ್ಡರ್‌ ಗೋಲ್ಡನ್‌ ಸೀರೆ ಓಕೆ. ಆದರೆ, ಪಾರ್ಟಿವೇರ್‌ ಹಾಗೂ ಕ್ಯಾಶುವಲ್‌ ಕಾರ್ಯಕ್ರಮಗಳಿಗಾದಲ್ಲಿ ಬಾರ್ಡರ್ ಇಲ್ಲದನ್ನು ಖರೀದಿಸಿ. ಇದು ಇಡೀ ಲುಕ್‌ ಬದಲಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)