ಇಂಡಿ: ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ ಎನ್ನುವುದಕ್ಕೆ ಶಾರೀರಿಕ ಸಾಮರ್ಥ್ಯವೇ ಕಾರಣ. ಇದಕ್ಕೆ ಆಟ ,ಪಾಠ ಕ್ರೀಡೆಗಳು ದೈಹಿಕ ಕಸರತ್ತು ಮುಖ್ಯ ಇದಕ್ಕಾಗಿಯೇ ಶಾಸಕ ಯಶವಂತ ರಾಯಗೌಡ ಪಾಟೀಲರು ಕಳೆದ ೨೦೧೫-೧೬ನೇಸಾಲಿನಲ್ಲಿ ವಿಜಯಪೂರ ರಸ್ತೆಯಲ್ಲಿ ಜಿಲ್ಲೆಯಲ್ಲಿಯೇ ಇರು ವಂತೆ ಅತ್ಯೆಂತ ಭವ್ಯ ಸುಂದರವಾದ ತಾಲೂಕಾ ಕ್ರೀಡಾಂಗಣ ರಾಜ್ಯ, ರಾಷ್ಟç, ಅಂತ ರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳನ್ನು ಹುಟ್ಟು ಹಾಕುತ್ತಿದೆ. ತಾಲೂಕಿನ ಹಾಗೂ ವಿವಿಧ ಶಾಲಾ ,ಕಾಲೇಜುಗಳ ವಿವಿಧ ಸ್ಫರ್ಧೆಗಳಿಗೆ, ಕ್ರೀಡೆಗಳಿಗೆ ಮನರಂಜನೆಗಳಿಗೆ ಸರಕಾರದ ಕಾರ್ಯಕ್ರಮಗಳು ಕ್ರೀಡಾಂಗಣದಲ್ಲಿ ಇಂದಿಗೂ ಸತತ ಸಾಗುತ್ತಾ ಬಂದಿವೆ.
ತಾಲೂಕಿನಲ್ಲಿ ಈ ಹಿಂದೆ ತಾಲೂಕಾಡಳಿತದಿಂದ ನಡೆಯುವ ಕಾರ್ಯಕ್ರಮಗಳಿಗೆ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದವು. ಯಾವುದೇ ಆಟ, ಪಾಠಗಳು ಕ್ರೀಡೆಗಳು ಏರ್ಪಡಿಸಿದರೂ ಪಟ್ಟಣದ ಹೃದಯ ಭಾಗದ ಪೊಲೀಸ್ ಪರೇಡ ಮೈದಾನ ದಲ್ಲಿ ನಡೆಯುವದರಿಂದ ಸಾರ್ವಜನಿಕರಿಗೆ ಹಾಗೂ ಸಮೀಪದ ಸರಕಾರದ ಇಲಾಖೆಗಳಿಗೆ ಸಾಕಷ್ಟು ತೊಂದರೆಯಾಗಿತ್ತು ,ಇದಲ್ಲದೆ ಹಿರಿಯ ನಾಗರೀಕರು ನಿತ್ಯ ವಾಯು ವಿಹಾರ ಮಾಡಬೇಕಾದರೆ ಯಾವುದೇ ರೀತಿಯ ಸೌಲಭ್ಯಗಳು ಇರಲ್ಲಿಲ್ಲ. ವಿವಿಧ ಶಾಲಾ, ಕಾಲೇಜುಗಳ ಪಂದ್ಯಾಟಗಳು .ಕ್ರೀಡೆಗಳು, ಸ್ಪರ್ಧಾತ್ಮಕ ಚಟುವಟಿಕೆಗಳಿಗೂ ಸ್ಥಳಾವಕಾಶ ಇಲ್ಲದೆ ತೊಂದರೆಯಾಗಿತ್ತು.
ಈ ಹಿಂದೆ ಕ್ರೀಢಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇಂದಿನ ತಾಲೂಕಾ ಕ್ರೀಡಾಂಗಣದ ಪ್ರಭಾರ ಅಧಿಕಾರಿ ಚಂದ್ರಶೇಖರ ವಾಲೀಕಾರ ಸ್ವತ ಕ್ರೀಡಾ ಆಸಕ್ತರಾಗಿರುವದರಿಂದ ಹಾಗೂ ಕುಸ್ತಿ ಪಟುವಾಗಿರುವ ಇವರು ಶಾಸಕ ಯಶವಂತರಾಯಗೌಡ ಪಾಟೀಲರ ಬಳಿ ಮನವಿ ಮಾಡಿಕೊಂಡು ತಾಲೂಕಿನಲ್ಲಿ ಯುವ ಸಮುದಾಯಕ್ಕೆ ಗುಣಮಟ್ಟದ ಸ್ಟೇಡಿಯಂ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು. ನಂತರ ದೂರದೃಷ್ಠಿ ಹೊಂದಿದ ಶಾಸಕರು ಜಿಲ್ಲೆಯಲ್ಲಿಯೇ ಕ್ರೀಡಾಂಗಣ ಒಂದು ಮಾದರಿಯಾಗಿ ನಿರ್ಮಿಸಬೇಕು ಎಂದು ಸಂಕಲ್ಪತೊಟ್ಟು ಸುಮಾರು ೯೦ ಲಕ್ಷ ರೂ ಮೋತ್ತದಲ್ಲಿ ಶಾಸಕರು ಕ್ರೀಡಾಂಗಣ ನಿರ್ಮಿಸಿ ಕ್ರೀಡಾ ಸ್ಪರ್ಧಾಳುಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.
*
ಕ್ರೀಡಾಂಗಣದ ವೈಶಿಷ್ಠ; ೨೦೧೫-೧೬ನೇ ಸಾಲಿನಲ್ಲಿ ಲೋಕಾರ್ಪಣೆಗೊಂಡಿದೆ. ಮಂಜೂರಾದ ಮೋತ್ತ ೯೦ಲಕ್ಷ ರೂ, ಕ್ರೀಡಾಂಗಣದಲ್ಲಿ ೧೦,ಲಕ್ಷ ರೂ ದಲ್ಲಿ ಕುಸ್ತಿ ಗರಡಿ ಮನೆ,೧೫ ಲಕ್ಷ ರೂ .ದಲ್ಲಿ ಜಿಮ್ಮ ಹಾಲ್, ಬ್ಯಾಸ್ಕೇಟ್ ಬಾಲ್ ಕ್ರೀಡಾಂಗಣ, ವ್ಹಾಲಿಬಾಲ್ ಮೈದಾನ ಸೇರಿದಂತೆ ಒಳಗಾಂಗಣ ಕ್ರೀಡೆಯ ಮೈಧಾನ ಇತರೆ ಸಾಮುಗ್ರಿಗಳು ಶಾಸಕರ ಅನುಧಾನದಲ್ಲಿ ಒದಗಿಸಿಕೊಟ್ಟಿದ್ದಾರೆ. ಇಂತಹ ಅದ್ಭತ ಕ್ರೀಡಾಂಗಣ ಹಾಗೂ ಗರಡಿಮನೆ ನಿರ್ಮಾಣಕ್ಕೆ ಶಾಸಕರ ಇಚ್ಛಾ ಶಕ್ತಿ ಹಾಗೂ ದೂರದೃಷ್ಠಿಯೇ ಕಾರಣ, ಕ್ರೀಡಾಂಗಣ ನಿರ್ಮಾಣ ಹಂತದಲ್ಲಿರುವಾಗ ಸದಾ ಭೇಟಿ ನೀಡಿ ವೀಕ್ಷಣೆ ಮಾಡಿ ಗುಣಮಟ್ಟ ದಾಗಿರಬೇಕು ಎಂದು ತಾಕೀತು ಮಾಡುತ್ತಿದ್ದರು. ಕನ್ನಡ ರಾಜ್ಯೋತ್ಸವ, ೧೫ ನೇ ಅಗಸ್ಟ್ , ೨೬ನೇ ಗಣರಾಜ್ಯೋತ್ಸವ ಇತರೆ ಸರಕಾರಿ ಶಾಲಾ ಕಾಲೇಜುಗಳ ಕಾರ್ಯಕ್ರಮಗಳು ತಾಲೂಕಾ ಕ್ರೀಡಾಂಗಣದಲ್ಲಿ ಇಂದು ನಡೆಯುವಂತಾಗಲು ಶಾಸಕರೆ ಕಾರಣ.ಇವರ ಸದಾಶೇಯದಂತೆ ತಾಲೂಕಿನ ಅನೇಕ ಕ್ರೀಡಾಪಟುಗಳು ರಾಜ್ಯ ಅಂತರಾಷ್ಟಿçÃಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.