Tuesday, 10th December 2024

Halloween Style Ideas: ಹಾಲೋವೀನ್‌‌‌ ಪಾರ್ಟಿಗೆ ಭಯಾನಕವಾಗಿ ಮೇಕಪ್ ಮಾಡಿಕೊಳ್ಳುವುದು ಹೇಗೆ?

Halloween Style Ideas

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹ್ಯಾಲೋವೀನ್‌ ಪಾರ್ಟಿಗಳಲ್ಲಿ ಸ್ಪೂಕಿ ಸ್ಟೈಲಿಂಗ್‌ (Halloween Style Ideas) ಮಾಡುವುದು ಇದೀಗ ತೀರಾ ಸಾಮಾನ್ಯವಾಗಿದೆ. (ಅಕ್ಟೋಬರ್ 31 ಹಾಲೋವೀನ್‌ ಡೇ ಆಚರಿಸಲಾಗುತ್ತದೆ) ವಿದೇಶದ ಈ ಕಾನ್ಸೆಪ್ಟ್‌ನ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು ಹೇಗೆಲ್ಲಾ ಸ್ಟೈಲಿಂಗ್‌ ಮಾಡಿಕೊಳ್ಳಬಹುದು, ಇದಕ್ಕಾಗಿ ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ ಜೆನ್‌ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್‌

ಹಾಲೋವಿನ್‌ ಲುಕ್‌ಗೆ ಸಿಂಪಲ್‌ ಐಡಿಯಾ ಟ್ರೈ ಮಾಡಿ

ದೆವ್ವ- ಭೂತದಂತೆ ಮೇಕಪ್‌ನಲ್ಲಿ ಮುಳುಗೆದ್ದಂತೆ ಕಾಣುವ ಕಾಂಪ್ಲೀಕೇಟೆಡ್‌ ಡ್ರೆಸ್ಸಿಂಗ್‌ ಮಾಡಬೇಡಿ. ಹೆಚ್ಚು ತಲೆ ಬಿಸಿಯಿಲ್ಲದೇ ಮಾಡಬಹುದಾದ ಉಡುಗೆಗಳನ್ನು ಧರಿಸಿ. ಉದಾಹರಣೆಗೆ., ಬಿಳಿ ವರ್ಣದ ಹೊದಿಕೆಯನ್ನು ಮುಡಿಯಿಂದ ಪಾದದವರೆಗೂ ಹಾಕಿಕೊಳ್ಳಿ. ಕಣ್ಣಿನ ಜಾಗದಲ್ಲಿ ಮಾತ್ರ ತೂತು ಮಾಡಿ. ಹೆಚ್ಚು ಖರ್ಚಿಲ್ಲದೇ ಬಿಳಿ ಭೂತದ ಕಾಸ್ಟ್ಯೂಮ್‌ ರೆಡಿಯಾಗುವುದು.

ಭಯಾನಕ ಮೇಕಪ್‌ನಿಂದ ಹಾಲೋವಿನ್‌ ಲುಕ್‌

ಭಯಾನಕ ಮೇಕಪ್‌ನಿಂದಲೂ ಸ್ಪೂಕಿ ಲುಕ್‌ ಮಾಡಬಹುದು. ಇದು ನೋಡಲು ಎಂತಹವರನ್ನು ಭಯಬೀಳುವಂತೆ ಮಾಡುತ್ತದೆ. ಯುಟ್ಯೂಬ್‌ನಲ್ಲಿ ಈ ಕುರಿತ ಐಡಿಯಾಗಳು ಸಿಗುತ್ತವೆ.

ಚಿತ್ರ –ವಿಚಿತ್ರ ವಿಗ್‌ನಿಂದ ಸ್ಪೂಕಿ ಲುಕ್‌

ಚಿತ್ರ-ವಿಚಿತ್ರ ಹೇರ್‌ಸ್ಟೈಲ್‌ ಕೂಡ ಭಯಾನಕವಾಗಿ ಕಾಣುವಂತೆ ಮಾಡುತ್ತವೆ. ಕೂದಲನ್ನು ಪ್ರಯೋಗ ಮಾಡಲು ಇಚ್ಛಿಸದವರು, ಕೃತಕ ವಿಗ್‌ ಧರಿಸಬಹುದು. ಕಾಸ್ಟ್ಯೂಮ್‌ ಅದಲು-ಬದಲು ಮಾಡಿ. ನಿಮ್ಮ ಹಳೆಯ ಕಾಸ್ಟ್ಯೂಮ್‌ ಅನ್ನು ಸ್ನೇಹಿತರೊಂದಿಗೆ ಅದಲು ಬದಲು ಮಾಡಿ ಧರಿಸಿ. ಪದೇ ಪದೇ ಹೊಸದನ್ನು ಕೊಳ್ಳುವ ಬದಲು ರಿಕ್ರಿಯೇಟ್‌ ಮಾಡಿ.

ಸ್ಪೂಕಿ ಪಾರ್ಟಿ ಥೀಮ್‌ ಡ್ರೆಸ್‌ಕೋಡ್‌

ಕೆಲವು ಸ್ಪೂಕಿ ಪಾರ್ಟಿ ಥೀಮ್‌ ಹಾಗೂ ಕಾನ್ಸೆಪ್ಟ್ ಆಧಾರದ ಮೇಲೆ ನಡೆಯುತ್ತವೆ. ಅದಕ್ಕೆ ತಕ್ಕಂತೆ ಹಾರರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ಉಡುಪುಗಳು ಬಾಡಿಗೆಗೆ ಕೂಡ ದೊರಕುತ್ತವೆ.

ಈ ಸುದ್ದಿಯನ್ನೂ ಓದಿ | Rajendra Bhat Column: ಎರಡೂ ಕಾಲಿಲ್ಲದೆ ಮೌಂಟ್ ಎವರೆಸ್ಟ್ ಏರಿದವನ ಕಥೆ !

ಪಾರ್ಟಿ ಪ್ರಿಯರು ಗಮನದಲ್ಲಿಡಿ

  • ಭಯಾನಕ ಮೇಕಪ್‌ ತ್ವಚೆಯ ಫ್ರೆಂಡ್ಲಿಯಾಗಿರಲಿ, ಕಳಪೆ ಮೇಕಪ್‌ ಮೊರೆ ಹೋಗಬೇಡಿ.
  • ದೆವ್ವದ ಲುಕ್‌ ನೀಡಲು ಬಹಳಷ್ಟು ಮಂದಿ ಕಲರ್ಡ್‌ ಲೆನ್ಸ್‌ ಧರಿಸುತ್ತಾರೆ. ಆದಷ್ಟೂ ಇದನ್ನು ಆವಾಯ್ಡ್ ಮಾಡಿ.
  • ಹಾರರ್‌ ಲುಕ್‌ ಹೆಸರಲ್ಲಿ ಮಕ್ಕಳಿಗೆ ಕಿರಿಕಿರಿಯಾಗುವಂತಹದ್ದನ್ನು ಹಾಕಬೇಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)