ಶಾಸಕ ನಡಹಳ್ಳಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳ ಸಭೆ
ಮುದ್ದೇಬಿಹಾಳ: ದೇಶಾದ್ಯಂತ ಭಾರತ ಸ್ವಾತಂತ್ರö್ಯದ ೭೫ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಆ.೧೧ ರಿಂದ ಆ.೧೭ರವರೆಗೆ ದೇಶದ ಪರತಿ ಮನೆಯಲ್ಲೂ ರಾಷ್ಟçಧ್ವಜ ಹಾರಿಸಿ ದೇಶಭಕ್ತಿ ಬಿಂಬಿಸುವ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನ ವನ್ನು ಎಲ್ಲರೂ ಸೇರಿ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಯಶಸ್ವಿಗೊಳಿಸಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕರೆ ನೀಡಿದರು.
ಇಲ್ಲಿನ ತಾಪಂ ಸಭಾ ಭವನದಲ್ಲಿ ಶುಕ್ರವಾರ ಅಭಿಯಾನ ಕುರಿತು ಏರ್ಪಡಿಸಿದ್ದ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಮಟ್ಟದ ಅಧಿಕಾರಿಗಳ, ಪಿಡಿಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡಿದರು.
ಆಯಾ ಇಲಾಖೆಯವರು ತಾವು ನಡೆಸುವ ಅಭಿಯಾನಗಳಿಗೆ ಹೆಚ್ಚು ಪ್ರಚಾರ ಕೊಡಬೇಕು. ಕರಪತ್ರ, ಬ್ಯಾನರ್ ಮುದ್ರಿಸಿ ಹಂಚಿಕೆ ಮಾಡಬೇಕು. ಇದಕ್ಕಾಗಿ ತಂಡ ರಚಿಸಬೇಕು. ತಂಡಗಳಲ್ಲಿ ಸಾರ್ವಜನಿಕರ ಪ್ರತಿನಿಧಿ ಗಳನ್ನೂ ಸೇರಿಸಿಕೊಳ್ಳಬೇಕು. ಪಿಡಿಓಗಳು ಮುಂದಿನ ೪-೫ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಸಭೆ ನಡೆಸಿ ಪ್ರತಿ ಮನೆಗೂ ಈ ಅಭಿಯಾನದ ಬಗ್ಗೆ ಪ್ರಚಾರ ಮಾಡಬೇಕು. ಆರೋಗ್ಯ ಇಲಾಖೆಯವರು ಸಾದ್ಯವಿರುವ ಎಲ್ಲ ರೀತಿಯ ಶಿಬಿರಗಳನ್ನೂ ನಡೆಸಬೇಕು. ಖಾಸಗಿ ವೈದ್ಯರನ್ನು, ಔಷಧ ವ್ಯಾಪಾರಸ್ಥರನ್ನು ಸೇರಿ ಆರೋಗ್ಯ ಇಲಾಖೆಗೆ ಸಂಬAಧಿಸಿದ ಎಲ್ಲರನ್ನೂ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳ ಕಾರಣದಿಂದಾಗಿ ದಾಸ್ಯದ ಸಂಕೋಲೆಯಿ0ದ ಬಿಡುಗಡೆಯಾದ ಭಾರತಾಂಬೆಗೆ ಸ್ವಾತಂತ್ರö್ಯ ಪ್ರಾಪ್ತಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಭವ್ಯ ಭಾರತ ಕಟ್ಟುವಲ್ಲಿ ಇದು ನಮ್ಮ ಜವಾಬ್ಧಾರಿಯೂ ಆಗಿದೆ. ಅದರಂತೆ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವ ಹೊಣೆ ಸರ್ಕಾರಿ ನೌಕರರದ್ದು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನದ್ದೂ ಜವಾಬ್ಧಾರಿಯಾಗಿದೆ ಎಂದರು.
ಅಭಿಯಾನದಲ್ಲಿ ರಾಜ್ಯ ಸರ್ಕಾರದ ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಉದ್ಯಮಗಳು, ಸ್ವ ಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಶಾಲೆ ಕಾಲೇಜು ಮಕ್ಕಳು, ಸಾರ್ವಜನಿಕರು, ಇತರೆ ಎಲ್ಲ ಸಂಘ ಸಂಸ್ಥೆಗಳವರು ತಮ್ಮ ಕುಟುಂಬದವ ರೊಡಗೂಡಿ ತಮ್ಮ ಮನೆಗಳ ಮೇಲೆ ತಿರಂಗಾ ಹಾರಿಸಲು ಕ್ರಮವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಗೃಹ ವ್ಯವಹಾರಗಳ ಮಂತ್ರಾಲಯವು ಭಾರತ ಧ್ವಜ ಸಂಹಿತೆ-೨೦೨೨ಕ್ಕೆ ತಿದ್ದುಪಡಿ ತಂದಿದೆ. ಕೈಯಲ್ಲಿ ಅಥವಾ ಯಂತ್ರ ದಿ0ದ ತಯಾರಿಸಿದ ಪಾಲಿಸ್ಟರ್, ಹತ್ತಿ, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯ ೨೦*೩೦ ಅಥವಾ ಈ ಅಳತೆಯ ಅರ್ಧದಷ್ಟು ರಾಷ್ಟçಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಿದೆ. ಈ ಕುರಿತು ಈಗಿನಿಂದಲೇ ಪ್ರತಿ ಗ್ರಾಪಂ ಮಟ್ಟದಲ್ಲಿ, ಪ್ರತಿ ಹಳ್ಳಿ ಹಳ್ಳಿಗೆ, ಮನೆ ಮನೆಗೆ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ತಮ್ಮ ಮನೆಯ ಮೇಲೆ, ಮನೆಯ ಅಂಗಳದಲ್ಲಿ ಕುಟುಂಬ ಸಮೇತರಾಗಿ ರಾಷ್ಟç ಧ್ವಜಾರೋಹಣ ಮಾಡು ವಂತೆ ತಮ್ಮ ಪೋಷಕರಿಗೆ ತಿಳಿಸಲು ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗೂ ಬೆಳಗಿನ ಪ್ರಾರ್ಥನೆಯ ವೇಳೆ ಅರಿವು ಮೂಡಿಸಬೇಕು. ಸ್ವಸಹಾಯ ಸಂಘಗಳು, ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು, ಸಹಕಾರ ಸಂಘಗಳು, ಉಪ ಅಂಚೆ ಕಚೇರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜಗಾರ್ ಸೇವಕರು ಸೇರಿ ಎಲ್ಲರೂ ಪಾಲ್ಗೊಳ್ಳಲು ಸಂಬ0ಧಿಸಿದವರು ಅಗತ್ಯ ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ ಸೇರಿ ಸಾರ್ವಜನಿಕರ ನೇರ ಸಂಪರ್ಕ ಹೊಂದಿರುವ ಇಲಾಖೆಗಳ ಸ್ಥಳೀಯ ಕಚೇರಿ ಮುಖ್ಯಸ್ಥರೊಂದಿಗೆ ಅಭಿಯಾನ ಕುರಿತು ಕೈಕೊಂಡಿರುವ ಪೂರ್ವ ಚಟುವಟಿಕೆಗಳ ವಿವರ ಪಡೆದುಕೊಂಡ ಶಾಸಕರು ಹಲವು ಸಲಹೆ ಸೂಚನೆ ನೀಡಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಲು ತಿಳಿಸಿದರು.
ಮುದ್ದೇಬಿಹಾಳ ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ತಾಳಿಕೋಟೆ ತಹಶೀಲ್ದಾರ್ ಶ್ರೀಧರ ಗೋಟೂರ, ಮುದ್ದೇಬಿಹಾಳ ತಾಪಂ ಇಓ ಶಿವಾನಂದ ಹೊಕ್ರಾಣಿ, ತಾಳಿಕೋಟೆ ತಾಪಂ ಇಓ ಬಿ.ಆರ್.ಬಿರಾದಾರ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಮುಖ್ಯಸ್ಥರು, ಗ್ರಾಪಂಗಳ ಪಿಡಿಓಗಳು ಇದ್ದರು.
***
ಎಲ್ಲ ಮಾಧ್ಯಮದವರು ಸಾಮಾನ್ಯ ಸುದ್ದಿಗಳನ್ನು ಬದಿಗಿಟ್ಟು ಸ್ವಾತಂತ್ರö್ಯ ಹೋರಾಟಗಾರರು, ಅವರ ಕುಟುಂಬದವರ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದು ನಾವು ನಮ್ಮ ಮುಂದಿನ ಜನಾಂಗಕ್ಕೆ ಪ್ರೇರಣೆ ಕೊಡುವಂತಿರಬೇಕು. ಒಂದು ತಿಂಗಳ ಅಭಿಯಾನದುದ್ದಕ್ಕೂ ಮಾಧ್ಯಮದವರ ಲೇಖನಿ, ಬರವಣಿಗೆ, ಚಿಂತನೆ ದೇಶಕ್ಕಾಗಿ ಅರ್ಪಣೆಯಾಗಬೇಕು. ಇದು ಜನ ಮೆಚ್ಚುವ ಕಾರ್ಯವಾದ ಜೊತೆಗೆ ಪ್ರೇರಣೆಯೂ ಆಗಿರಲಿದೆ. ಒಬ್ಬ ಶಾಸಕನಾಗಿ ಈ ಬಗ್ಗೆ ಮಾಧ್ಯಮದವರಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು