Friday, 13th December 2024

ರಾಜ್ಯಾದ್ಯಂತ ಮೂರು ದಿನ ಭಾರಿ ಮಳೆ: ಕರಾವಳಿ ಭಾಗದಲ್ಲಿ ‘ಯೆಲ್ಲೋ’ ಅಲರ್ಟ್‌

ಬೆಂಗಳೂರು : ರಾಜ್ಯಾದ್ಯಂತ ಮುಂದಿನ ಮೂರು ದಿನಗಳು ಭಾರೀ ಮಳೆಯಾಗಲಿದೆ. ಸೂಚಿಸಿರುವ ರಾಜ್ಯ ಹವಾಮಾನ ಇಲಾಖೆ, ಉಡುಪಿಯಲ್ಲಿ ಆರೇಂಜ್, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವ ರಾಜ್ಯ ಹವಾಮಾನ ಇಲಾಖೆ, ಮುಂದಿನ ಮೂರು ದಿನಗಳ ಕಾಲ ರಾಜ್ಯಾ ದ್ಯಂತ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ಭಾರೀ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ ಎಂಬುದಾಗಿ ತಿಳಿಸಿದೆ.

ಕರಾವಳಿ ಭಾಗಗಳಲ್ಲಿಯೂ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ. ಕರಾವಳಿ ಭಾಗದ ಜನರು ಎಚ್ಚರಿಕೆ ಯಿಂದ ಇರುವಂತೆ ಸೂಚಿಸಿರುವ ಹವಾಮಾನ ಇಲಾಖೆ, ಯೆಲ್ಲೋ ಅಲರ್ಟ್ ಘೋಷಿಸಿದೆ.