Friday, 13th December 2024

ಶೀಲವಂತ ಹಿರೇಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಕೊಲ್ಹಾರ: ಪಟ್ಟಣದ ಶೀಲವಂತ ಹಿರೇಮಠದ ಪೀಠಾಧಿಪತಿಗಳಾದ ಕೈಲಾಸನಾಥ ಶ್ರೀಗಳ ಮಾತೋಶ್ರೀ ಪಾರ್ವತಮ್ಮನವರ ಪ್ರಥಮ ಪುಣ್ಯಸ್ಮ ರಣೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಜಗದ್ಗುರು ಧಾರುಕಾಚಾರ್ಯ ಪುಣ್ಯಧಾಮ ಕಳಸಾರೋಹಣ, ಪಂಚಪೀಠ ಕಳಶ ಪೂಜಾ ಸಮಾರಂಭ, ೧೦೮ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಂಚ ಪೀಠಗಳಾದ ಶ್ರೀ ಮದ್ ಉಜ್ಜೆನಿ, ರಂಬಾಪೂರಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಕಳಶ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಚಿಮ್ಮಲಗಿಯ ಅರಳೆಲೆ ಹಿರೇಮಠದ ನೀಲಕಂಠ ಶಿವಾಚಾರ್ಯರು, ಬ.ಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ತಡವಲಗ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರ ಶೇಖರ ಶೀವಾಚಾರ್ಯರು, ಖಾನ್ ಕಾಯೇ ಗಫ್ಫಾರೀಯಾ ಗುರುಕುಲದ ಪೀಠಾಧಿಪತಿಗಳಾದ ಅಲ್ ಹಾಜ್ ಬಕ್ತಿಯಾರ್ ಖಾನ್ ಪಠಾಣ, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಶಿವಶರಣಗೌಡ ಪಾಟೀಲ್, ಶಂಕ್ರೆಪ್ಪ ದೇಸಾಯಿ, ಜಾನಪದ ಕಲಾವಿದ ಚಿನ್ನಪ್ಪ ಗಿಡ್ಡಪ್ಪಗೋಳ, ಬಸವರಾಜ ಹಂಗರಗಿ, ಪ.ಪಂ ಸದಸ್ಯರಾದ ತೌಸೀಪ್ ಗಿರಾಗಂವಿ, ಬಾಬು ಬಜಂತ್ರಿ ಇತರರು ಇದ್ದರು.