Wednesday, 18th September 2024

ಬೇಡಿಕೆ ಈಡೇರದಿದ್ದರೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಸರ್ಕಾರ ಕೂಡಲೇ ಮಾತುಕತೆ ನಡೆಸಿ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಬೇಕೆಂದು ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಇಂದು ಸಂಜೆಯೊಳಗೆ ಮಾತುಕತೆ ನಡೆಸಲಿ. ಬೇಡಿಕೆ ಈಡೇರದಿದ್ದರೆ ನಾಳೆಯೂ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರೆ ಯುತ್ತದೆ ಎಂದು ಎಚ್ಚರಿಸಿದರು.

ಸಭೆ ವಿಫಲವಾದರೆ ನಮ್ಮ ಬೇಡಿಕೆ ಈಡೇರುವ ತನಕವೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಸಾರಿಗೆ ಸಚಿವರು ಪ್ರತಿಭಟನಾಕಾರರನ್ನಾಗಲಿ, ಅಧಿಕೃತ ನೌಕರರನ್ನಾಗಲಿ, ಸಂಘಟನೆಗಳ ಮುಖಂಡರನ್ನಾಗಲಿ ಸಭೆಗೆ ಆಹ್ವಾನಿಸಿಲ್ಲ. ಹೀಗಾಗಿ, ನೌಕರರ ಜತೆಯಾಗಿ ಪ್ರತಿಭಟನೆ ಮುಂದುವರೆಸುತ್ತೇವೆ.

ಈಗಾಗಲೇ, ಕೆಲ ರಾಜ್ಯಗಳಲ್ಲಿ ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲೇಕೆ ಪರಿಗಣಿಸಿಲ್ಲ? ಇವರಿಗೂ ಸಹ ಸರ್ಕಾರಿ ನೌಕರರ ಸ್ಥಾನಮಾನ ದೊರಕಬೇಕೆಂಬುದೇ ನಮ್ಮ ಆಶಯ ಎಂದರು.

Leave a Reply

Your email address will not be published. Required fields are marked *