Wednesday, 11th December 2024

ಸಹಕಾರ ಇದ್ದರೆ ಸಂಘ, ಸ0ಸ್ಥೆಗಳ ಉನ್ನತಿ ಸಾಧ್ಯ

ಇಂಡಿ: ಬಡವರನ್ನು ಮೇಲೆತ್ತುವಲ್ಲಿ ಸಹಕಾರಿ ಸಂಸ್ಥೆಯ ಪಾಲು ಅಪಾರವಾಗಿದೆ. ಗ್ರಾಹಕ ಬಂಧುಗಳು,ಆಡಳಿತ ಮಂಡಳಿ, ಸಿಬ್ಬ0ದಿ ವರ್ಗ ಸಹಕಾರದಿಂದ ಇದ್ದರೆ ಮಾತ್ರ ಸಂಘ, ಸ0ಸ್ಥೆಗಳು ಉನ್ನತಿ ಸಾಧಿಸಲು ಸಾಧ್ಯ ಎಂದು ಸಹಕಾರ ಸಂಘಗಳ ಉಪ ನಿಬಂಧಕರ ಇಲಾಖೆ ಅಧಿಕಾರಿ ವಿಜಯಕುಮಾರ ನಾಯಕ ಹೇಳಿದರು.

ಅವರು ಬುಧವಾರ ಪಟ್ಟಣದಲ್ಲಿ ಶ್ರೀ ಪುಂಡಲಿ0ಗೇಶ್ವರ ಪಜಾ ಪತ್ತಿನ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ ದರು.

ರಾಷ್ಟಾçಭಿವೃದ್ದಿಗೆ ಸಹಕಾರಿ ಸಂಘಗಳು ಊರುಗೋಲು ಇದ್ದಂತೆ,ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಸ್ವ ಸಹಾಯ ಸಂಘಗಳು, ಸಹಕಾರಿ ಸಂಘಗಳು ರಾಷ್ಟçದ ಪ್ರಗತಿಗೆ ಸಹಕಾರಿಯಾಗಿವೆ.ಸಹಕಾರಿ ಸಂಘಗಳು ಕೆಲವು ಅಭಿವೃದ್ದಿ ಹೊಂದಿವೆ.

ಇನ್ನೂ ಕೆಲವು ಅಭಿವೃದ್ದಿ ಹೊಂದುತ್ತಿಲ್ಲ.ಇದಕ್ಕೆ ಕಾರಣ ಸಹಕಾರಿ ಸಂಘಗಳಲ್ಲಿನ ಲೋಪದೋಷ ಕಾರಣ. ಅದನ್ನು ನಿಷ್ಠೆ,ಪ್ರಾಮಾಣಿಕವಾಗಿ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅಭಿವೃದ್ದಿ ಹೊಂದಬೇಕು. ಸಹಕಾರಿ ಸಂಘಗಳು ಕೇವಲ ಸಾಲ ಕೊಡುವುದಕ್ಕೆ ಅಷ್ಟೇ ಸೀಮಿತವಾಗಬಾರದು ಸಾರ್ವಜನಿಕರಿಗೆ,ರೈತರಿಗೆ ವಿಶೇಷ ಸೌಲಭ್ಯಗಳನ್ನು ದೊರೆಯುವ ಹಾಗೆ ಸಹಕಾರಿ ಸಂಘಗಳು ಮಾಡುವು ದರ ಮೂಲಕ ಬೆಳೆಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಖಾಜು ಸಿಂಗೆಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶ್ರೀಕಾಂತ ಚವ್ಹಾಣ, ನಿರ್ದೇಶಕರಾದ ಶರಣು ಕಾಂಬಳೆ, ಕಾರ್ಯದರ್ಶಿ ಅರ್ಜುನ ಚವ್ಹಾಣ, ಹಣಮಂತ ಅರವತ್ತು ಸೇರಿದಂತೆ ಸಂಘದ ನಿರ್ದೇಶಕರು ಕಾರ್ಯಕ್ರಮ ದಲ್ಲಿ ಇದ್ದರು.