Saturday, 14th December 2024

ಮಾ.೬ಕ್ಕೆ ಶ್ರೀರೇಣಸಿದ್ದೇಶ್ವರ ನೀರಾವರಿ ಭೂಮಿ ಪೂಜೆ 

ಇಂಡಿ: ತಾಲೂಕಿನ ಹೋರ್ತಿ ಭಾಗದ ಬಹುದಿನಗಳ ಕನಸು ಈಡೇರಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿಯವರಿಗೆ ಈ ಭಾಗದ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜನ ಕೀವುಡೆ ಹೇಳಿದರು.

ಅವರು ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಂಗಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು ಅವರು ಇಂಡಿ ,ನಾಗಠಾಣ ಮತಕ್ಷೇತ್ರ ಒಳಗೊಂಡAತೆ ೫೬ಹಳ್ಳಿಗಳಿಗೆ ೨೮ಸಾವಿರ ಹೆಕ್ಟರ್ ನೀರಾವರಿ ವಂಚಿತ ಪ್ರದೇಶಕ್ಕೆ ಆಲಿಮಟ್ಟಿ ಜಲಾಶೇಯದ ನೀರನ್ನು ಎತ್ತಿ ಒಟ್ಟಾರೆ ೪೯.೭೩೦ ಹೆಕ್ಟರ್ ೧.೨೨.೮೮೫ ಎಕರೆ ಪ್ರದೇಶಕ್ಕೆ ಹೋರ್ತಿ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ದಿನಾಂಕ ೯ ರಂದು ಮಧ್ಯಾಹ್ನ ೧೧-೦೦ ಗಂಟೆಗೆ ಹೋರ್ತಿ ಗ್ರಾಮದಲ್ಲಿ ಭೂಮಿ ಪೂಜಾ ಕಾರ್ಯಕ್ರಮ ವಿದ್ದು ಕಾರಣ ಸದರಿ ಯೋಜನೆ ಲೋಕಾರ್ಪಣೆಯಲ್ಲಿ ಮುಖ್ಯ ಮಂತ್ರಿ ಬಸವ ರಾಜ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ, ಜಿಲ್ಲೆಯ ಹೆಮ್ಮಯ ಅಭಿವೃದ್ದಿಯ ಹರಿಕಾರ ಸಂಸದ ರಮೇಶ ಜಿಗಜಿಣಗಿ ಹಾಗೂ ಸಚಿವರು , ಜಿಲ್ಲೆಯ ಶಾಸಕರು ,ವಿಧಾನಪರಿಷತ್ ಸದಸ್ಯರು, ಬಿಜೆಪಿ ವರಿಷ್ಠರು . ರಾಜ್ಯ ಮತ್ತು ಜಿಲ್ಲಾ ಮುಖಂಡರು ಆಗಮಿಸಲ್ಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಕಾರ್ಯಕ್ರಮ ಯಶಸ್ವೀಗೊಳಿಸಬೇಕು ಎಂದು ತಿಳಿಸಿದರು.

ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ರಾಜ್ಯ ಓಬಿಸಿ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಸ್ವದೇಶಿ ಮಂಚಿನ ಶಂಕರಗೌಡ ಪಾಟೀಲ, ಅನೀಲ ಜಮಾದಾರ, ಪ್ರಕೋಷ್ಠ ಹಣಮಂತರಾಯಗೌಡ ಪಾಟೀಲ,ಪುಟಣಗೌಡ ಪಾಟೀಲ, ಸುನಂದ ಗಿರಣಿವಡ್ಡರ್ ,ಸೋಮಶೇಖರ ನಿಂಬರಗಿಮಠ, ರಾಜಶೇಖರ ಎರಗಲ್ ವಿಸ್ತಾರಕ ವಿನೋದ ಸುತಾರ ಪ್ರತಿಕಾಗೋಷ್ಠಿಯಲ್ಲಿದ್ದರು.