Wednesday, 11th December 2024

ಕೌರವನಿಗೆ ಬೇಡವಾಯತೇ ಕೊಪ್ಪಳ ಜಿಲ್ಲೆ ?

ಕಾಂಗ್ರೆಸ್‌ಗೆ ಮರಳುವರೇ ಬಿ.ಸಿ. ಪಾಟೀಲ

ಬಿಜೆಪಿ ಶಾಸಕರು, ಸಂಸದ ಇದ್ದರೂ ಕಾಂಗ್ರೆಸ್ ಜತೆ ಒಡನಾಟ

ಸಿದ್ದು ಪಾಳೆಯ ಸೇರುವರು ಎಂಬ ಗುಸುಗುಸು

ವಿಶೇಷ ವರದಿ: ಬಸವರಾಜ ಕರ್ಕಿಹಳ್ಳಿ ಕೊಪ್ಪಳ

ಕೊಪ್ಪಳ ಜಿ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಮತ್ತೆ ಕಾಂಗ್ರೆಸ್‌ಗೆ ಮರಳಲಿzರೆಯೆ? ಅವರಿಗೆ ಉಸ್ತುವಾರಿ ನೀಡಿದ ಕೊಪ್ಪಳ ಜಿಲ್ಲೆ ಬೇಡವಾಯಿತೇ? ಎಂಬಿತ್ಯಾದಿ ಪ್ರಶ್ನೆಗಳು ಜಿಲ್ಲೆಯ ಜನರಲ್ಲಿ ಹುಟ್ಟಿಕೊಂಡಿವೆ. ಅವರ ಇತ್ತೀಚಿನ ಚಟುವಟಿಕೆಗಳು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

ಇತ್ತ ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾವಣೆಯ ಕೂಗು, ಅತ್ತ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ನಡೆದಿರುವಾಗಲೇ ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಬರುವ ಚುನಾವಣೆಯಲ್ಲಿ ಕಮಲ ತೊರೆದು ಮತ್ತೆ ಕೈ ಹಿಡಿಯಲಿದ್ದಾರೆ ಎಂಬ ಮಾತುಗಳು ಜಿಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಚರ್ಚೆಗೆ ಗ್ರಾಸ: ಜಿಲ್ಲೆಯಲ್ಲಿ ಮೂವರು ಶಾಸಕರು, ಓರ್ವ ಸಂಸದ ಸೇರಿದಂತೆ ಬಿಜೆಪಿಯ ಹಲವು ಮುಖಂಡರಿದ್ದರೂ ಅವರನ್ನು ವಿಶ್ವಾಸಕ್ಕೆ ಪಡೆಯದೇ ಕಾಂಗ್ರೆಸ್‌ನವರ ಜೊತೆ ಸಚಿವ ಪಾಟೀಲ್ ಉತ್ತಮ ಬಾಂಧವ್ಯ ಹೊಂದಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗುವಂತೆ ಮಾಡಿದೆ.

ಹಲವು ಅನುಮಾನ: ಮೊದ ಮೊದಲು ಜಿಯಲ್ಲಿ ಯಾವುದೇ ಅಕ್ರಮ ನಡೆದರೂ ಆ ಬಗ್ಗೆ ಕ್ರಮ ವಹಿಸುವ ಬಗ್ಗೆ ಸಚಿವ ಪಾಟೀಲ್ ಮಾತನಾಡುತ್ತಿದ್ದರು. ಆದರೆ ಇತ್ತೀಚಿಗೆ ಅಕ್ರಮಗಳ ಬಗ್ಗೆ ಮಾಧ್ಯಮದವರು ಕೇಳಿದರೆ ಹಾರಿಕೆ ಉತ್ತರ ಕೊಟ್ಟು ಜಾರಿಕೊಳ್ಳುತ್ತಾರೆ. ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಮಧ್ಯೆ, ಸಿದ್ದರಾಮಯ್ಯ ಪಾಳೆಯ ಸೇರಲು ಕಾಂಗ್ರೆಸ್‌ನವರ ಜೊತೆ ಉತ್ತಮ ಬಾಂಧವ್ಯ ಹೊಂದುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಅನುಮಾನಗಳು ಅವರು ಕೊಪ್ಪಳಕ್ಕೆ ಬಂದಾಗಲೆಲ್ಲ ಮರುಕಳಿಸುತ್ತಿವೆ. ಹಲವು ವರ್ಷಗಳಿಂದ ಕೊಪ್ಪಳಕ್ಕೆ ಜಿಲ್ಲೆಯವರಾರು ಉಸ್ತುವಾರಿ ಸಚಿವರಾಗದೇ ಅಭಿವೃದ್ಧಿ ಶೂನ್ಯವಾಗಿದೆ. ನಡೆದಿರುವ ಅಕ್ರಮ, ಭ್ರಷ್ಟಾಚಾರಗಳ ಬಗ್ಗೆ ಕೇಳುವವರೇ ಇಲ್ಲ.

ಹಿಟ್ನಾಳರಿಂದ ಪಾಟೀಲರಿಗೆ ಪಾರ್ಟಿ: ಬಿ.ಸಿ. ಪಾಟೀಲ್ ಅವರು ಇತ್ತೀಚಿಗೆ ಆಕ್ಸಿಜನ್ ಘಟಕ ಉದ್ಘಾಟನೆಗೆಂದು ಕೊಪ್ಪಳಕ್ಕೆ ಭೇಟಿ ನೀಡಿದ್ದರು. ಅದರ ಹಿಂದಿನ ರಾತ್ರಿ ಕಿರ್ಲೋಸ್ಕರ್ ಕಾರ್ಖಾನೆಯ ಗೆಸ್ಟ್‌ಹೌಸ್ ನಲ್ಲಿ ಸಿದ್ದರಾಮಯ್ಯ ಅವರ ಮಾನಸ ಪುತ್ರ, ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಪಾಟೀಲರಿಗೆ ಔತಣಕೂಟ ಏರ್ಪಡಿಸಿದ್ದರು. ಅಂದು ಅಲ್ಲಿಗೆ ಯಾವ ರಾಜಕಾರಣಿಗೂ ಪ್ರವೇಶ ಇರಲಿಲ್ಲ. ಬಿಜೆಪಿಯ ಸಚಿವರೊಬ್ಬರಿಗೆ ಕಾಂಗ್ರೆಸ್ ಶಾಸಕ ಪಾರ್ಟಿ ಕೊಡಿಸಿದ್ದು
ಅಚ್ಚರಿ ಉಂಟು ಮಾಡಿದೆ.

ಬೇಸರ ವ್ಯಕ್ತಪಡಿಸಿದ ಶಾಸಕ
ಬಿ.ಸಿ. ಪಾಟೀಲ್ ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಜಿಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಇದಕ್ಕೆಲ್ಲ ಕಡಿವಾಣ ಇಲ್ಲವಾಗಿದೆ ಎಂದು ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ಧಡೆಸುಗುರು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸಚಿವರಾದ ಹೊಸತರಲ್ಲಿ ಜಿಯ ಪ್ರಗತಿ ಬಗ್ಗೆ ಇದ್ದ ಉತ್ಸಾಹ ಈಗ ಇಲ್ಲದಿರುವುದು ಎದ್ದು ಕಾಣುತ್ತಿದೆ. ಬಿಜೆಪಿ ಶಾಸಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿಪಕ್ಷದವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದೇ ಈ ಎಲ್ಲಾ ಬಿರುಕುಗಳಿಗೆ ಕಾರಣ ಎನ್ನುವುದು ಜಗಜ್ಜಾಹೀರಾಗಿದೆ.

***

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಕಾಂಗ್ರೆಸ್‌ಗೆ ಮರಳುವ ಬಗ್ಗೆ ನನಗೆ ಮಾಹಿತಿ ಇಲ್ಲ. ೨೦೨೩ರ ಸಂದರ್ಭದಲ್ಲಿ ಅವರು ಪಕ್ಷಕ್ಕೆ ಮರಳುವ ಬಗ್ಗೆ ನಮ್ಮ ರಾಜ್ಯ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗಲೇ ಏನೂ ಹೇಳಲು ಆಗದು.
– ಶಿವರಾಜ ತಂಗಡಗಿ
ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ