Wednesday, 11th December 2024

ಸಂವಿದಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಿ: ವಕೀಲರ ಸಂಘದ ಅದ್ಯಕ್ಷ ಕೆ. ಜಗದಪ್ಪ

ಹರಪನಹಳ್ಳಿ: ಇಡೀ ಜಗತ್ತಿನಲ್ಲಿಯೇ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ರಾಷ್ಟ್ರ ದಲ್ಲಿ ಸಂವಿಧಾನ ಹೊಂದಿರುವ ರಾಷ್ಟ್ರದಲ್ಲಿ ಸಂವಿಧಾನ ಪವಿತ್ರ ಮಹಾಗ್ರಂಥವಾಗಿದ್ದು ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ  ತಿಳಿದುಕೊಳ್ಳುವಂತಾಗಬೇಕು ಎಂದು ವಕೀಲರ ಸಂಘ ಅಧ್ಯಕ್ಷ ಕೆ. ಜಗದಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲ ಸಂಘ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸಂವಿಧಾನ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಬಾಗ ವಹಿಸಿ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಬಳಿಕ ಮಾತನಾಡಿದ ಅವರು ರಾಷ್ಟçದ ಸಂವಿಧಾನದಲ್ಲಿ ೨೫ ವಿಭಾಗಗಳಲ್ಲಿ ೪೪೮ ವಿಧಿಗಳು ೧೨ ಪರಿಚ್ಛೇದಗಳು ೫ ಅನುಬಂಧಗಳು ಇವೆ. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯಲ್ಲಿ ಸಂರಕ್ಷಿಸಿಡಲಾಗದೆ ಎಂದರು.

ಅಪರ ಸರ್ಕಾರಿ ವಕೀಲರಾದ ವಿ.ಜಿ. ಪ್ರಕಾಶ್ ಗೌಡ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯ ಗಳನ್ನು ತಿಳಿಸಿಲಾಗಿದ್ದು, ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಶಿರಸ್ತೆದಾರ ಪ್ರವೀಣ್ .ಕೆ. ಜಂಟಿ ಕಾರ್ಯದರ್ಶಿ. ಎಂ.ನಾಗೇಂದ್ರಪ್ಪ , ನ್ಯಾಯಾಲಯದ ಸಿಬ್ಬಂದಿ ಮುರುಳಿಧರ್ ಮಾತನಾಡಿದರು,ಸಿರಸ್ತೆದಾರರಾದ ರಮೇಶ್.ಬಿ. ನಾಗರಾಜ್, ವಕೀಲರಾದ, ಟಿ. ವೆಂಕಟೇಶ್, ಎಂ.ಮೃತAಜಯ್ಯ, ಹುಲಿಯಪ್ಪ ಓ.ತಿರುಪತಿ, ಎಸ್. ಜಾಕೀರ್, ಬಂಡ್ರಿ ಆನಂದ, ಜೆ.ಸೀಮಾ, ಕೆ. ಕೊಟ್ರೇಶ್, ಕೆ. ಸಣ್ಣನಿಂಗನಗೌಡ, ದೊಡ್ಡಮನಿ ಪ್ರಸಾದ್, ಮದ್ದಾನಪ್ಪ, ಕೊಂಗನಸುರು ಸಿದ್ದೇಶ್, ಬಿ. ತಿಪ್ಪೇಶ್, ಸಿ.ಹಾಲೇಶ್, ಸೀರಾಜ್, ನ್ಯಾಯಾಲಯದವ ಸಿಬ್ಬಂಧಿಗಳಾದ ಮಂಜುನಾಥ ಜನವಾಡೆ, ಮೇಘರಾಜ್, ಶಿವಾನಂದ, ಶೋಭಾ, ಕುಬೇರ , ಉಜ್ವಾಲ, ಮಾರುತಿ, ಕೊಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.