Thursday, 19th September 2024

ಒಂದೇ ತಿಂಗಳ ಆಡಳಿತಕ್ಕೆ ಪಾಸೋ, ಫೇಲೋ ಹೇಳೋದು ಕಷ್ಟ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಬಸವರಾಜ‌ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ತಿಂಗಳಷ್ಟೇ ಕಳೆದಿದೆ. ಸಣ್ಣ ಅವಧಿಯಲ್ಲಿ ಸರ್ಕಾರ ಆಡಳಿತ ನಡೆಸುವ ವಿಷಯದಲ್ಲಿ ‌ಪಾಸೋ, ಫೇಲೋ ಎಂದು ನಿರ್ಧರಿಸುವುದು ಕಷ್ಟ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಪಾಲಿಕೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಶೆಟ್ಟರ್ ಪತ್ನಿ ಶಿಲ್ಪಾ ಹಾಗೂ ಪುತ್ರ ಸಂಕಲ್ಪ ಶೆಟ್ಟರ್ ಇದ್ದರು.

ಮುಂದಿನ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ‌ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ದಾವಣ ಗೆರೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಕುರಿತು, ಚುನಾವಣೆ ಇನ್ನೂ ದೂರವಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ‌. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದರು.

ಯಡಿಯೂರಪ್ಪ ಸ್ವಯಂ ಆಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಶಾ ಅವರೇ ಹೇಳಿದ್ದು, ನಾನು ಹೇಳುವುದು ಎನೂ ಇಲ್ಲ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೆ ಎರಿಕೆ ಆಗುವುದು ಸಹಜ‌ ಎಂದರು.

 

Leave a Reply

Your email address will not be published. Required fields are marked *