ಹರಪನಹಳ್ಳಿ: ದೇಶವು ಅಭಿವೃದ್ಧಿ ಹೊಂದಬೇಕಾದರೆ ಕಾರ್ಮಿಕರ ಪ್ರತಿಫಲದಿಂದ ಮಾತ್ರ ಸಾಧ್ಯ ಕಾರ್ಮಿಕರನ್ನು ಗೌವರಿಸಿ, ಯಾವುದೇ ವಸ್ತುಗಳನ್ನು ತಯಾರಿಸಿದರು ಸಹಾ ಕಾರ್ಮಿಕರಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಎಂ.ಭಾರತಿ ಹೇಳಿದರು.
ತಾಲೂಕಿನ ಯಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಪಂಚಾಯತಿ ಕಾರ್ಯಲಯ ಹರಪನಹಳ್ಳಿ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಏರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು.
ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಷ್ಟç ಅಮೇರಿಕಾ ದೇಶವಾದರೆ ಅರ್ಥಿಕವಾಗಿ ಹಿಂದೂಳಿದ ರಾಷ್ಟç ಭಾರತವಾಗಿದೆ. ಆದ್ದರಿಂದ ನಾವುಗಳು ಕಾರ್ಮಿಕರನ್ನು ಮತ್ತು ದೇಶದ ರೈತರನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಆಗುವುದಕ್ಕೆ ಸಾಧ್ಯವಾಗುತ್ತದೆ. ಕಾರ್ಮಿಕರ ಶ್ರಮವನ್ನು ಎಷ್ಟು ಶ್ಲಾಘಿಸಿದರು ಸಾಲದು ಡಾ|| ಬಿ.ಆರ್. ಅಂಬೇಡ್ಕರ್ ರವರು ೧೯೪೨ ರಲ್ಲಿ ಕಾನೂನು ಮಂತ್ರಿಯಾಗಿದ್ದಾಗ ದೇಶದ ಕಾರ್ಮಿಕರಿಗಾಗಿ ಅನೇಕ ಕಾನೂನು ಕಾಯ್ದೆಗಳನ್ನು ಜಾರಿಗೊಳಿಸಿದ್ದಾರೆ. ಕಾರ್ಮಿಕರು ಸರ್ಕಾರದಿಂದ ಬರುವ ಅನೇಕ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಮಿಕರಿಗೆ ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಕಾರ್ಯನಿರ್ವಹಕ ಅಧಿಕಾರಿ ಪ್ರಕಾಶ್, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ , ಕಾರ್ಮಿಕ ನಿರೀಕ್ಷಕ ಆರ್. ನಾಗೇಶ್, ಮಾತನಾಡಿದರು ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಸರ್ಕಾರಿ ಗ್ರಾ.ಪಂ.ಅಧ್ಯಕ್ಷ ಆನಂದ, ಮಲ್ಲೇಶ್ ನಾಯ್ಕ, ವಕೀಲರಾದ ಮೃತಂಜಯ್ಯ, ವಾಮದೇವ ಕಂಡ್ಯಪ್ಪ, ರೇವಣಸಿದ್ದಪ್ಪ, ಕೋಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.