Saturday, 14th December 2024

ಕನ್ನಡ ಭಾಷೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಮಂಜುನಾಥ್ ಇಂಜಾತ್ಕರ್

ಹರಪನಹಳ್ಳಿ: ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಇಜಾಂತಕರ್ ಹೇಳಿದರು.

ಪಟ್ಟಣದ ತೆಗ್ಗಿನಮಠ ಸಂಸ್ಥೆಯ ಕಟ್ಟಿ ಸೇತುರಾಮಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ೧೦೮ನೇ ಸಂಸ್ಥಾಪನ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಪೋಷಕರು ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆಯ ಜ್ಞಾನವನ್ನು ಬೆಳೆಸಬೇಕಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ ಮಾತನಾಡಿ ಜಾಗತೀಕರಣದ ಪ್ರಭಾವದಿಂದ ಅನೇಕ ಭಾಷೆಗಳು, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಅಪಾಯ ಎದುರಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಭಾಷೆ, ನೆಲ, ಜಲ ಪ್ರೀತಿಸಿ ಅವುಗಳನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಕುರಿತು ಪ್ರೋ.ಹೆಚ್.ಕೊಟ್ರೇಶ್ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ.ರಾಜಶೇಖರ ಮಾತನಾಡಿ ಕನ್ನಡಕ್ಕೆ ತನ್ನದೆ ಆದ ಇತಿಹಾಸ ವಿದ್ದು, ಸಾಹಿತ್ಯ, ಸಾಂಸ್ಕೃತಿಕ, ಉಡಿಗೆ, ತೊಡಿಗೆಯಲ್ಲಿ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ಭಾರತೀಯ ಮೂಲ ನಿವಾಸಿ ದ್ರಾವಿಡರಾದ ನಾವುಗಳು ಭಾಷೆ, ನಾಡು, ನುಡಿ ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿ ದ್ದೇವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತೃಬಾಷೆ ತಾಯಿಯ ತೋದಲು ನುಡಿ ಕನ್ನಡ ಬಾಷೆ ಮಾತನಾಡುತ್ತೆವೆ ಕನ್ನಡದ ಬಗ್ಗೆ ನಮಗೆ ಗೌರವಪ್ರೀತಿ ಅಭಿಮಾನ ವಿರಬೇಕು ಇತರೆ ಬಾಷೆಗಳನ್ನು ಕಲಿತು ಜಾಣರಾಗಬೇಕು. ಸರ್ಕಾರ ಉದ್ಯೋಗ ಸೇರಿದಂತೆ ವಿವಿಧ ರಂಗಗಳಲ್ಲಿ ಕನ್ನಡಿಗರಿಗೆ ಮೊದಲ ಅದ್ಯತೆನೀಡಬೇಕು ಮಕ್ಕಳು ದಿನಪತ್ರಕೆ ಓದುವ ಹವ್ಯಾಸ ರೂಡಿಸಿಕೋಳ್ಳಬೇಕು.

ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಮತ್ತು ಈಬಾರಿಯ ಎಸ್.ಎಸ್.ಎಲ್.ಸಿಯಲ್ಲಿ ೧೦೦ಕ್ಕೆ ೧೦೦ ರಷ್ಟು ಪಲಿತಾಂಶ ಬರಬೇಕು. ಕನ್ನಡ ಸಾಹಿತ್ಯ ಪರಿಷತ್ತು ನಾಡಿನಾದ್ಯಂತ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ದಿಟ್ಟ ಹೆಜ್ಜೆ ಇಟ್ಟಿದೆ, ಈ ನಿಟ್ಟಿನಲ್ಲಿ ತಾವುಗಳು ಸಹ ಕಸಾಪ ಅಜೀವ ಸದಸ್ಯತ್ವವನ್ನು ಪಡೆದುಕೊಂಡು, ಕನ್ನಡ ಪರ ಅನೇಕ ಕಾರ್ಯಕ್ರಮ ಗಳು, ಹೋರಾಟಗಳ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಪ್ರಗತಿ ಪರ ಕೃಷಿಕ ಆಲದಹಳ್ಳಿ ಷಣ್ಮುಖಪ್ಪ ಸಾಹಿತಿ ಕೆ.ಎಸ್.ವೀರಭದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಸರ್ಕಾರಿ ಉದ್ಯೋಗಗಳನ್ನು ನಂಬಿ ಕೊಂಡು ಜೀವನ ವ್ಯರ್ಥ ಮಾಡಿಕೊಳ್ಳುವ ಬದಲು. ಅಧುನಿಕ ಕೃಷಿ ವ್ಯವಹಾರ ಸೇರಿದಂತೆ ಅನೇಕ ವೈಯಕ್ತಿಕ ವ್ಯವಹಾರಗಳನ್ನು ಮಾಡುವ ಮೂಲಕ ಜೀವನ ರೂಪಿಸಿ ಕೋರ್ಲಳುವ ಮೂಲಕ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಗಳಿಸಿದ ಕನ್ನಡ ಬಾಷೆಯನ್ನು ಉಳಿಸಿ ಬೆಳಸುವ ಅಗತ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಆರ್.ಪದ್ಮರಾಜ ಜೈನ್, ಜಿ.ಮಹಾದೇವಪ್ಪ, ಕಾರ್ಯಕಾರಿ ಮಂಡಳಿಯ ನಿರ್ದೆಶಕರುಗಳಾದ ಪಿ.ಕರಿಬಸಪ್ಪ, ಎಸ್.ಮಕಬುಲ್ ಭಾಷ, ಬಿ.ಎಂ.ನಾಗರಾಜ, ಮುಖಂಡರುಗಳಾದ ಬಸವರಾಜ ಬಂಡಾರಿ, ಇಸ್ಮಾಯಿಲ ಎಲಿಗಾರ ಉಪನ್ಯಾಸಕರುಗಳಾದ ಟಿ.ಎಚ್.ಗಿರೀಶ್, ಸಂತೋಷ್, ಕೆ.ಎಂ.ಲತಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.