ಬೆಂಗಳೂರು: ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ʼರಿಚ್ಚಿʼ ಚಿತ್ರದ (Kannada New Movie) ʼಸನಿಹ ನೀ ಇರುವಾಗʼ ಎಂಬ ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸದ್ಯದಲ್ಲೇ A2 ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಲಿದೆ.
ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವೆಂಕಟಾಚಲಯ್ಯ ಹಾಗೂ ರಾಕೇಶ್ ರಾವ್ ಅವರ ಸಹ ನಿರ್ಮಾಣವಿರುವ ʼರಿಚ್ಚಿʼ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ | Reliance Jio: ಹೊಸ ವರ್ಷಕ್ಕೆ ‘ನ್ಯೂ ಇಯರ್ ವೆಲ್‌ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದ ಜಿಯೋ!
ಅಜಿತ್ ಕುಮಾರ್ ಅವರ ಛಾಯಾಗ್ರಹಣ ʼರಿಚ್ಚಿʼ ಚಿತ್ರದಲ್ಲಿ ʼಟಗರುʼ ಖ್ಯಾತಿಯ ಮಾನ್ವಿತ ಕಾಮತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.