Tuesday, 5th November 2024

ಕಾರ್ಮಿಕ ಭವನ ಅತೀ ಶೀಘ್ರ ಈಡೇರಿಸುವ ಭರವಸೆ: ಯಶವಂತರಾಯಗೌಡ ಪಾಟೀಲ

ಇಂಡಿ: ಕೇಂದ್ರ, ರಾಜ್ಯ ಸರಕಾರಗಳು ಸಂಘಟಿತ, ಅಸಂಘಟಿತ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಮಾಡಿದೆ. ಇಂತಹ ಯೋಜನೆಗಳ ಮೂಲಕ ಕಾರ್ಮಿಕರು ಸಶ್ಯಕ್ತರಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ದೇಶದ ಪ್ರತಿಯೋಂದು ಅಭಿವೃದ್ದಿಗೆ ಕಾರ್ಮಿಕರ ಕೊಡುಗೆ ಅನೂನ್ಯವಾಗಿದ್ದು ನಿಮ್ಮಂತಹ ಕಾರ್ಮಿಕರಿಗೆ ಗೌರವಿಸುವ ಕೆಲಸ ಸರಕಾರಗಳಿಂದ ನಡೆಯಬೇಕು. ಈ ದೇಶದ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ನಿಮ್ಮ ಶ್ರಮ ಸಾಕಷ್ಟು ನಿಮ್ಮ ಬೆವರಿನ ಹನಿಗೆ ಬೆಲೆ ಸಿಗುವಂತಾಗಲು ಒಗ್ಗಟ್ಟಿನಿಂದ ಇರಬೇಕು. ಇತಿಹಾಸದ ಪುಟಗಳಲ್ಲಿ ಉಳ್ಳವರು ಇಲ್ಲದವರ ಮಧ್ಯ ಸಾಕಷ್ಟು ಹೋರಾಟಗಳು ನಡೆದಿವೆ ಕೊನೆಗೆ ಶ್ರಮಿಕರಿಗೆ ಜಯವಾಗಿದೆ. ಮಹಾತ್ಮಾಗಾಂಧಿಯವರು ತಮ್ಮನ್ನು ಒಬ್ಬ ಕಾರ್ಮಿಕ, ಶ್ರಮಿಕ ಎಂದು ಸಂತೋಷ ದಿOದ ಕರೆದುಕೊಂಡಿದ್ದಾರೆ. ಇದು ಶ್ರಮಿಕರ ಬಗ್ಗೆ ಇರುವ ಅವರ ಗೌರವಾ ದರ ಮಾತುಗಳಾಡಿದ್ದಾರೆ. ಶ್ರಮಿಕ ವರ್ಗ ಇಲ್ಲದೆ ಎನ್ನನ್ನು ಮಾಡಲು ಸಾಧ್ಯವಿಲ್ಲ. ಅನ್ನ ಕಾಯಕ,ಯಂತ್ರಗಳ ಬಗ್ಗೆ ಗಾಂಧಿಜಿಯವರಿಗೆ ಇದ್ದ ಅಭಿಪ್ರಾಯ ಅರ್ಥ ಮಾಡಿ ಕೊಂಡರೆ ಶ್ರಮಿಕರ ಸಮಸ್ಯಗಳ ಬಗ್ಗೆ ಅವರಿಗಿದ್ದ ಕಳಕಳಿಯನ್ನು ತಿಳಿದುಕೊಳ್ಳ ಬಹುದು.

ಇಂದು ಅನೇಕ ಕಾರ್ಮಿಕರ ಬೇರೆ ಕಡೆ ಕೆಲಸ ಮಾಡುವ ಸಂಧರ್ಬಗಳಲ್ಲಿ ನಿಮ್ಮ ಮಕ್ಕಳಿಗೆ ಕಲಿಕೆಗೆ ಶೈಕ್ಷಣಿಕ ಸಾಕಷ್ಟು ತೊಂದರೆಗಳು ಅನುಭವಿಸುತ್ತಿರುವುದು ಕಂಡಿದ್ದೇನೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕುಂಟಿತಗೋಳ್ಳುತ್ತಿರುವುದು ಕಂಡು ಬಂದಿದೆ. ಕಾರ್ಮಿಕ ಇಲಾಖೆ ಶ್ರಮಿಕ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಇನ್ನಷ್ಟು ಮಹತ್ವ ನೀಡಬೇಕು. ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಳವಿದೆ ಅದರಲ್ಲಿ ಇಂಡಿ ಪಟ್ಟಣದಲ್ಲಿಯೇ ಅತೀ ಹೆಚ್ಚು ಕಾರ್ಮಿಕರು ಇದ್ದಾರೆ. ಕಾರ್ಮಿಕರು ಶ್ರಮಿಕ ವರ್ಗ ಅಧಿಕಾರಿಗಳು ಕಳಕಳಿಯಿಂದ ಕೆಲಸ ಮಾಡಿ ಇವರಿಗೆ ಸಹಾಯ ಮಾಡಿದರೆ ಭಗವಂತ ನಿಮ್ಮ ಕುಟುಂಬಕ್ಕೆ ಒಳ್ಳೇಯದನ್ನು ಕರುಣಿಸುತ್ತಾನೆ.ತಾಲೂಕಿನಲ್ಲಿ ಕಾರ್ಮಿಕರ ಭವನ ನಿರ್ಮಾಣ ಬೇಡಿಕೆ ಇರುವುದರಿಂದ ಪ್ರಮಾಣಿಕವಾಗಿ ಅತೀ ಶೀಘ್ರದಲ್ಲಿಯೇ ಕ್ರಮಕೈಗೋಳ್ಳುವ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ಬನ್ನೇಮ್ಮಾ ಹದರಿ, ಕಾರ್ಮಿಕ ಅಧಿಕಾರಿ ಎಸ್.ಜಿ ಖೈನೂರ, ಕಾರ್ಮಿಕ ನೀರಿಕ್ಷಕಿ ಜಗದೇವಿ ಸಜ್ಜನ, ಕಾರ್ಮಿಕ ಸಂಘದ ಅಧ್ಯಕ್ಷ ಎಲ್.ಡಿ ನಧಾಪ. ಜಿಲ್ಲಾ ಕಾರ್ಮಿಕ್ಷ ಅಧ್ಯಕ್ಷ ನಾನಾಗೌಡ ಪಾಟೀಲ ವೇದಿಕೆಯಲ್ಲಿದ್ದರು.