ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಪರಶುರಾಮ ರವರ ಮೂಲಕ ತಾ.ಅಧ್ಯಕ್ಷ ರಮೇಶ ನೀರಮಾನ್ವಿ ಮನವಿ ಸಲ್ಲಿಸಲಾಯಿತು.
ಮಹಾರಾಷ್ಟದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟು ಹಾಕಿದ ಶಿವಸೇನೆಯ ಕಾರ್ಯಕರ್ತರನ್ನು ಕೂಡಲೇ ಬಂದಿಸಬೇಕು ಹಾಗೂ ಬೆಳಗಾವಿಯಲ್ಲಿ ಜರುಗುತ್ತಿರುವ ಮಹಾಮೇಳವನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರ ಸಂಪತ್ ದೇಸಾಯಿಯವರನ್ನು ರಾಜ್ಯ ಸರಕಾರ ಬಂಧಿಸಿದ್ದು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಎಂ.ಇ.ಎಸ್ ಹಾಗೂ ಶಿವಸೇನೆಯಂತಹ ಸಂಘಟನೆಗಳನ್ನು ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ಆನಂದಪ್ಪ ಮಾಡಗಿರಿ, ಮಹಾದೇವ ತುಪ್ಪದೂರು, ಕಿರಣ್ ಕುಮಾರ್, ಹುಲಿಗೆಪ್ಪ ಸೇರಿದಂತೆ ಇನ್ನಿತರರು ಇದ್ದರು.