Friday, 13th December 2024

Karnataka Weather: ಇಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ; ಒಳನಾಡಿನಲ್ಲಿ ಶುಷ್ಕ ಹವಾಮಾನ

Karnataka Weather

ಬೆಂಗಳೂರು: ಸೆ.19ರಂದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಮುಖ್ಯವಾಗಿ ಶುಷ್ಕ ಹವಾಮಾನ ಇರಲಿದೆ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ.

ಇನ್ನು ಸೆ. 20ರಂದು ಕೂಡ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಇದೇ ರೀತಿಯ ವಾತಾವರಣ ಸೆ.23ರವರೆಗೆ ಇರಲಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಒಣ ಹವಾಮಾನ ಸಾಧ್ಯತೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31° C ಮತ್ತು 20° C ಆಗಿರಬಹುದು.

ರಾಜ್ಯದ ಪ್ರಮುಖ ಡ್ಯಾಂಗಳಲ್ಲಿ ನೀರು ಸಂಗ್ರಹಣೆ (ಸೆ.18ರಂದು)

ರಾಜ್ಯದ ಎಲ್ಲಾ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 895.62 ಟಿ.ಎಂ.ಸಿ ಸಾಮಾರ್ಥ್ಯವಿದ್ದು, 866.80 ಟಿ.ಎಂ.ಸಿ ನೀರು ಸಂಗ್ರಹಣೆಯಾಗಿದ್ದು, ಒಟ್ಟು ಸಾಮಾರ್ಥ್ಯದ ಶೇ.97ರಷ್ಟಿದೆ. ವಿದ್ಯುತ್ ಉತ್ಪಾದನೆ ಜಲಾಶಯಗಳಲ್ಲಿ ಶೇ.96ರಷ್ಟು, ಕಾವೇರಿ ಕಣಿವೆ 4 ಜಲಾಶಯಗಳಲ್ಲಿ ಶೇ.99ರಷ್ಟು, ಹಾಗೂ ಕೃಷ್ಣಾ ಕಣಿವೆ ವ್ಯಾಪ್ತಿ ಜಲಾಶಯಗಳಲ್ಲಿ ಶೇ.98ರಷ್ಟು ನೀರಿನ ಸಂಗ್ರಹಣೆಯಿದೆ.

ಸೆ. 18ರ ಅನ್ವಯ ಒಟ್ಟಾರೆ ಎಲ್ಲಾ ಜಲಾಶಯಗಳಿಗೆ 4.9 ಟಿ.ಎಂ.ಸಿ ನೀರು ಹರಿದು ಬಂದಿದ್ದು, ವಿದ್ಯುತ್ ಉತ್ಪಾದನಾ ಜಲಾಶಯಗಳಿಗೆ 0.9 ಟಿಎಂಸಿ, ಕಾವೇರಿ ಕಣಿವೆ ಜಲಾಶಯಗಳಿಗೆ 0.9 ಟಿಎಂಸಿ ಹಾಗೂ ಕೃಷ್ಣ ಕಣಿವೆ ಜಲಾಶಯಗಳಿಗೆ 3.1 ಟಿಎಂಸಿ ಒಳಹರಿವು ಕಂಡುಬಂದಿದೆ.