Saturday, 7th September 2024

ವಿಧಾನಸಭೆ ಚುನಾವಣೆ: ನಾಳೆ ಬಿಜೆಪಿ ಪಟ್ಟಿ ಪ್ರಕಟ..!

ಬೆಂಗಳೂರು: ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಮೂರು ಪಕ್ಷಗಳ ಅಭ್ಯರ್ಥಿ ಆಯ್ಕೆ ಕಸರತ್ತು ಚುರುಕುಗೊಂಡಿದೆ.

ದೆಹಲಿಯಲ್ಲಿ ನಡೆಯುವ ಮೋದಿ ನೇತೃತ್ವದ ಸಭೆಯಲ್ಲಿ ಬಿಜೆಪಿ ಟಿಕೇಟ್ ಅಂತಿಮ ಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಒಂದು ಕ್ಷೇತ್ರಕ್ಕೆ ಮೂವರಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಹೈಕಮಾಂಡ್ ಗೂ ರವಾನಿಸಿದೆ. ಈಗ ಅಂತಿಮಗೊಂಡಿರುವ ಅಭ್ಯರ್ಥಿಗಳ ಪೈಕಿ ಗೆಲ್ಲುವ ಕುದುರೆಯನ್ನು ಹುಡುಕುವ ಫೈನಲ್ ಸಭೆಗೆ ಮೋದಿ ಎಂಟ್ರಿಕೊಟ್ಟಿದ್ದು, ಭಾನುವಾರ ಸಂಜೆ ದೆಹಲಿಯಲ್ಲಿ ಪ್ರಧಾನಿ‌ಮೋದಿ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಂಸದೀಯ ಮಂಡಳಿಯ ಅಂತಿಮ ಸಭೆಯಲ್ಲಿ ಪಟ್ಟಿ ಫೈನಲ್ ಅಗಲಿದ್ದು ನಾಳೆ ಬಿಜೆಪಿ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಬಳಿಕ ಸಂಜೆ ನಡೆಯಲಿರುವ ಸಂಸದೀಯ ಮಂಡಲಿ ಸಭೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಟಿಕೆಟ್ ಪಟ್ಟಿ ಅಂತಿಮಗೊಳ್ಳಲಿದೆ.

ಈ ಸಭೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಎರಡು ದಿನಗಳಿಂದ ನಾಯಕರಿಂದ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಿದ್ದಾರೆ. ಅಂತಿಮಗೊಂಡ ಟಿಕೆಟ್ ಪಟ್ಟಿ ನಾಳೆ ಪ್ರಕಟವಾಗಲಿದ್ದು, ಟಿಕೇಟ್ ಆಕಾಂಕ್ಷಿಗಳ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಸದ್ಯ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಚಾಮರಾಜನಗರ ಹಾಗೂ ಮೈಸೂರು ಪ್ರವಾಸ ಮುಗಿಸಿ, ಮಧ್ಯಾಹ್ನ ದೆಹಲಿಗೆ ವಾಪಸ್ಸಾಗಲಿದ್ದು, ಬಿಜೆಪಿ ನಾಯಕರು ದೆಹಲಿಯಲ್ಲೇ ಬೀಡುಬಿಟ್ಟು ಟಿಕೇಟ್ ಲಾಭಿಯಲ್ಲಿ ತೊಡಗಿದ್ದಾರೆ.

error: Content is protected !!