Saturday, 14th December 2024

Kaun Banega Crorepati: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 12.5 ಲಕ್ಷ ಗೆದ್ದ ಕಾರ್ಕಳ ಮೂಲದ ಯುವಕ!

Kaun Banega Crorepati

ಉಡುಪಿ: ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್‌ ಬನೇಗಾ ಕರೋಡ್‌ಪತಿ (Kaun Banega Crorepati) ಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಂಜೂರು ಮೂಡುಮನೆ ಡಾ. ಶ್ರೀಶ್‌ ಸತೀಶ್‌ ಶೆಟ್ಟಿ ಅವರು 12.5 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಅ. 10 ಮತ್ತು 11 ರಂದು ಪ್ರಸಾರವಾದ ಸಂಚಿಕೆಯಲ್ಲಿ 12 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಕರಾವಳಿಯ ಯುವಕ 12.5 ಲಕ್ಷ ರೂ. ಗೆದ್ದುಕೊಂಡಿದ್ದಾರೆ.

ಡಾ. ಶೆಟ್ಟಿ ಅವರು 12 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದರು. 13ನೇ ಪ್ರಶ್ನೆಯಾಗಿ 1971ರ ಮುಂಬೈ ಉತ್ತರಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯ ಹೆಸರು ಕೇಳಲಾಗಿತ್ತು. ಜ. ಕೆ.ಎಂ.ಕಾರ್ಯಪ್ಪ, ವಿಜಯ ತೆಂಡೂಲ್ಕರ್‌, ಪಂ. ಭೀಮಸೇನ್‌ ಜೋಷಿ ಹಾಗೂ ರಾಜ್‌ ಕಪೂರ್‌ ಆಯ್ಕೆ ನೀಡಲಾಗಿತ್ತು. ಈ ಪ್ರಶ್ನೆಗೆ ಸರಿಯಾದ ಉತ್ತರದ ಬಗ್ಗೆ ಸ್ಪಷ್ಟತೆ ಇರದಿದ್ದರಿಂದ ಸ್ಪರ್ಧೆಯಿಂದ ಡಾ. ಶ್ರೀಶ್‌ ಸತೀಶ್‌ ಶೆಟ್ಟಿ ಹಿಂದೆ ಸರಿದು 12.5 ಲ.ರೂ. ಗೆದ್ದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru News: ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ‘ಆಶ್ವಾಸನ ಪ್ರಶಸ್ತಿ’

ಡಾ. ಶ್ರೀಶ್‌ ಸತೀಶ್‌ ಶೆಟ್ಟಿ ಅವರು ಪಳ್ಳಿ-ನಿಂಜೂರು ಮೂಡುಮನೆ ಶ್ರಿವಲ್ಲಿ ಶೆಟ್ಟಿ ಮತ್ತು ಸುರತ್ಕಲ್‌ ದೇವಿ ನಿಲಯ ಸತೀಶ್‌ ಶೆಟ್ಟಿ ಅವರ ಪುತ್ರನಾಗಿದ್ದು, ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ.
ಗುಜರಾತ್‌ ವಲ್ಸಡ್‌ನ‌ ಜಿಎಂಇಆರ್‌ಎಸ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪೂರೈಸಿದ್ದು, ಪ್ರಸ್ತುತ ಅಹಮದಾಬಾದ್‌ನ ಬಿಜೆ ಮೆಡಿಕಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ(ಎಂಡಿ) ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.