Friday, 13th December 2024

ಸೋಮವಾರ ಕನ್ನಡ ರಥ ಕೊಲ್ಹಾರ ಪಟ್ಟಣಕ್ಕೆ

ಕೊಲ್ಹಾರ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಜ್ಯೋತಿಯನ್ನು ಹೊತ್ತ ರಥ ಜಾಥಾ ಸೋಮವಾರ ಕೊಲ್ಹಾರ ಪಟ್ಟಣಕ್ಕೆ ಆಗಮಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಶಿಂಪೀರ ವಾಲಿಕಾರ್ ಹೇಳಿದರು.

ಕೊಲ್ಹಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು. ಸೋಮವಾರ ಮುಂಜಾನೆ ಪಟ್ಟಣದ ದಿಗಂಬರೇಶ್ವರ ಮಠದಿಂದ ಸರಕಾರಿ ಪ್ರಾಥಮಿಕ ಶಾಲೆಯವರೆಗೆ ಮೆರವಣಿಗೆ ಮೂಲಕ ಕನ್ನಡ ರಥವನ್ನು ತರಲಾಗುವುದು.

ಈ ಕಾರ್ಯಕ್ರಮದಲ್ಲಿ ಶಾಸಕ ಶಿವಾನಂದ ಪಾಟೀಲ್, ತಾಲ್ಲೂಕ ದಂಡಾಧಿಕಾರಿ ಪಿ ಜಿ ಪವಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಕನ್ನಡಾಭಿ ಮಾನಿಗಳು ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲ್ಲೂಕ ಅಧ್ಯಕ್ಷರಾದ ಅಶೋಕ ಆಸಂಗಿ, ದಯಾನಂದ ಹಿರೇಮಠ, ಎಸ್ ಬಿ ಪತಂಗಿ, ಮಲ್ಲಪ್ಪ ಗಣಿ, ಹನೀಪ ಮಕಾನದಾರ, ರಾಜಾಸಾಬ ಶಿವನಗುತ್ತಿ ಇತರರು ಇದ್ದರು.