Saturday, 14th December 2024

ಕೊಲ್ಹಾರ ಪಟ್ಟಣದ ಮೂಲಕ ಬಸ್ಸುಗಳ ಸಂಚಾರಕ್ಕೆ ಕರವೇ ಆಗ್ರಹ

ಕೊಲ್ಹಾರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಚರಿಸುವ ಸರ್ಕಾರಿ ಸಾರಿಗೆ ಬಸ್ಸುಗಳು ಕೊಲ್ಹಾರ ಪಟ್ಟಣದ ಮೂಲಕ ಸಂಚರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ ಮಾತನಾಡಿ ಕೊಲ್ಹಾರ ಪಟ್ಟಣದಲ್ಲಿ ಎರಡು ಸುಸಜ್ಜಿತ ಬಸ್ ನಿಲ್ದಾಣ ಗಳಿದ್ದು ಪ್ರತಿದಿನ ನೂರಾರು ಪ್ರಯಾಣಿಕರು ಪಟ್ಟಣದಿಂದ ಸಂಚರಿಸುವುದರಿಂದ ಬಸ್ಸುಗಳು ಪಟ್ಟಣದ ಒಳಗಡೆ ಬಾರದೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ನೇರವಾಗಿ ಸಂಚರಿಸುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ ಕೂಡಲೇ ಬಸ್ಸುಗಳು ಪಟ್ಟಣದ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರವೇ ಮುಖಂಡ ರವಿ ಗೊಳಸಂಗಿ ಮಾತನಾಡಿ ಸಾರಿಗೆ ಬಸ್ಸುಗಳು ಕೊಲ್ದಾರ ಪಟ್ಟಣದ ಒಳಗಡೆ ಸಮರ್ಪಕವಾಗಿ ಬರದಿರುವುದರಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಕೂಡಲೇ ಅಧಿಕಾರಿಗಳು ಕೈಗೊಳ್ಳುಬೇಕು ಇಲ್ಲದಿದ್ದಲ್ಲಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ವಿಜಯ ಗಿಡ್ಡಪ್ಪಗೋಳ, ಪ್ರದೀಪ ಪಾಟೀಲ್, ಗುರು ಗಿಡ್ಡಪ್ಪಗೋಳ, ಬಸವರಾಜ ಗಡ್ಡಿಪೂಜಾರಿ, ಈರಣ್ಣ ಬಾಗಿ, ರಾವತ ಬರಗಿ, ಸಗಯ್ಯ ಹಿರೇಮಠ ಹಾಗೂ ಇತರರು ಇದ್ದರು.