ಕೊಲ್ಹಾರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಲ್ಹಾರ ಪ.ಪಂ ಕಾರ್ಯಾ ಲಯದ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ದಲ್ಲಿ ಶಾಲಾ ಮಕ್ಕಳಿಗೆ ಸೂಕ್ತ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಮಕ್ಕಳು ಬಿಸಲಿಗೆ ಬಸವಳಿದು ಹೋದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತ ಮಂಡಳಿಯ ಸರ್ವ ಅಧಿಕಾರಿಗಳು ಉಪಸ್ಥಿತರಿದ್ದರು ಅಧಿಕಾರಿಗಳು ಪೆಂಡಾಲ್ ನೆರಳಿನ ವ್ಯವಸ್ಥೆಯಲ್ಲಿ ಕುಳಿತಿದ್ದರೆ ಮಕ್ಕಳು ಮಾತ್ರ ಬಿರುಬಿಸಿಲಿನಲ್ಲಿ ಕುಳಿತು ಪರಿತಪಿಸುವಂತಾಯಿತು.
ಕೆಲ ಮಕ್ಕಳಿಗೆ ತಲೆ ಸುತ್ತಿ ಬಂದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ನೀರು ಕುಡಿಸಿ ಮಕ್ಕಳನ್ನು ನೆರಳಿನೆಡೆಗೆ ಕೊಂಡ್ಯೋಯ್ದ ಸಂತೈಸಿದರು.
ಒಟ್ಟಾರೆ, ತಾಲ್ಲೂಕ ಆಡಳಿತದ ಸರ್ವ ಅಧಿಕಾರಿಗಳು ನೆರಳಿನಲ್ಲಿ ಕುಳಿತು ಮಕ್ಕಳನ್ನು ಬಿರುಬಿಸಿಲಿನಲ್ಲಿ ನಿಲ್ಲಿಸಿದ್ದು ಚರ್ಚೆಗೆ ಗ್ರಾಸವಾಯಿತು.