ಕೊಲ್ಹಾರ: ಕೆಆರ್‌ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ “ಕರ್ನಾಟಕಕ್ಕಾಗಿ ನಾವು” ಬೈಕ್ ರ್ಯಾಲಿ ಶನಿವಾರ ಪಟ್ಟಣಕ್ಕೆ ಆಗಮಿಸಿತು.
ಪಾರದರ್ಶಕ, ಪ್ರಾಮಾಣಿಕ, ಜನಪರ ರಾಜಕಾರಣದ ಉದ್ದೇಶದಿಂದ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ, ಬಡವರು ಬೆಳೆಯಬೇಕು, ಬಡವರು ಉಳಿಯ ಬೇಕು, ಬಡವರಿಗಾಗಿಯೇ ಕೆಆರ್‌ಎಸ್ ಪಕ್ಷ ಉದಯಿಸಿದ್ದು ಎಂದರು. ಜನರು ಪ್ರಬುದ್ಧರಾಗಬೇಕು ಭ್ರಷ್ಟರನ್ನು ರಾಜಕೀಯವಾಗಿ ತಿರಸ್ಕರಿಸಿ, ಪ್ರಾಮಾಣಿಕ ರಿಗೆ ಮನ್ನಣೆ ನೀಡಬೇಕು ಜನ ಸಾಮಾನ್ಯರು ಕೂಡಾ ಚುನಾವಣೆಗೆ ನಿಂತು ಗೆಲ್ಲುವಂತಾಗಬೇಕು, ಪಾರದರ್ಶಕ ಆಡಳಿತ ನಡೆಸುವಂತಾ ಗಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ್ ಜಾಧವ, ಜಿಲ್ಲಾ ಉಸ್ತುವಾರಿಗಳಾದ ವಿಜಯಕುಮಾರ್ ಯು.ಬಿ, ಜಿಲ್ಲಾ ಕಾರ್ಯದರ್ಶಿಗಳಾದ ಮಹಾಂತೇಶ್ ಮರನೂರ್ ತಾಲೂಕು ಅಧ್ಯಕ್ಷ ಬಸು ಕುದರಿ ಸಹಿತ ಅನೇಕರು ಇದ್ದರು.