Friday, 13th December 2024

23ಕ್ಕೆ ಕುಂಬಾರರ ಶಕ್ತಿ ಪ್ರದರ್ಶನ, ಜಾಗೃತಿ ಸಮಾವೇಶ

ಕೊಲ್ಹಾರ: ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳಿಂದ ಹಾಗೂ ಸರಕಾರಗಳಿಂದ ರಾಜಕೀಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಕಡೆಗಣಗೆ ಒಳಗಾಗಿರು 20 ಲಕ್ಷಕಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ಅತ್ಯಂತ ಹಿಂದುಳಿರುವ ಕುಂಬಾರ ಸಮುದಾಯ.

ಸಮುದಾಯದ ಹಲವಾರು ಬೇಡಿಕೆಗಳ ಈಡೇರಿಕಾಗಿ ಪ್ರತಿ ಬಾರಿ ಸರ್ಕಾರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಹವಾಲಗಳನ್ನು ವಿವಿಧ ವೇದಿಕೆಗಳ ಮೂಲಕ ನೀಡಿದರು ಕೂಡ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಅನುಕೂಲಕರವಾದ ವಾತಾವರಣ ನಿರ್ಮಾಣ ವಾಗಿಲ್ಲ ಬೇಡಿಕೆಗಳು ಈಡೇರಿಲ್ಲ.

ಹಾಗಾಗಿ ಸ್ವಾಮಿಜಿಗಳ ದಿವ್ಯಸಾನಿಧ್ಯದಲ್ಲಿ ಮತ್ತು ರಾಜ್ಯದ ಸಮಸ್ತ ಕುಂಬಾರ ಸಮಾಜದ ನೇತೃತ್ವದಲ್ಲಿ ಕುಂಬಾರರ ಶಕ್ತಿ ಪ್ರದರ್ಶನ ಮತ್ತು ಜಾಗೃತಿ ಸಮಾವೇಶ ದಿನಾಂಕ 23-07-22ರಂದು ಬೆಂಗಳೂರಿನ ಟೌನ ಹಾಲನಲ್ಲಿ ಬೆಳಗ್ಗೆ 10ಕ್ಕೆ ಸಮಾವೇಶ ಹಮ್ಮಿಕೊಳ್ಳ ಲಾಗಿದೆ.

ರಾಜ್ಯದ ಸಮಸ್ತ ಕುಂಬಾರ ಸಮುದಾಯವು ಈ ಒಂದು ಶಕ್ತಿ ಪ್ರದರ್ಶನಕ್ಕೆ ಮತ್ತು ಜಾಗೃತಿ ಸಮಾವೇಶ ನಡೆಸುತ್ತಿದೆ. ಆದ್ದರಿಂದ ಜಿಲ್ಲೆಯ ಹೆಚ್ಚಿನ ಜನರು ಪಾಲಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ನಾಗರಾಜ ಕಲ್ಲಪ್ಪ ಕುಂಬಾರ ಕೊಲ್ಹಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.