Saturday, 14th December 2024

ಲಾಂಗ್ ಡ್ರೈವ್ ವೇಳೆ ಕಳ್ಳತನ: ಲೇಡಿ ಗ್ಯಾಂಗ್​​​​​ ಅರೆಸ್ಟ್

ದೇವನಹಳ್ಳಿ : ಲಾಂಗ್ ಡ್ರೈವ್ ಹೊರಟು ಸಿಕ್ಕಿ ಸಿಕ್ಕ ಅಂಗಡಿ ದೋಚುತ್ತಿದ್ದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಶೋಕಿಗಾಗಿ ಕಳ್ಳತನ ಮಾಡ್ತಿದ್ದ ಲೇಡಿ ಗ್ಯಾಂಗ್​​​​​ ಅನ್ನು ಅರೆಸ್ಟ್ ಮಾಡಲಾಗಿದೆ.

ದೇವನಹಳ್ಳಿ ಪೊಲೀಸರು ಖತರ್ನಾಕ್​​ ಕಳ್ಳಿಯರನ್ನು ರಾಷ್ಟ್ರೀಯ ಹೆದ್ದಾರಿ 7ರ ಅಮಾನಿಕೆರೆ ಬಳಿ ಬಂಧಿಸಿದ್ದಾರೆ.

ತೆಲಂಗಾಣದ ಪ್ರಕಾಶಂ ಜಿಲ್ಲೆಯ ಸುಮಲತಾ, ಅಂಕಮ್ಮ, ರಮ್ಯಾ, ಇಸ್ಮಾಯಿಲ್ ಬಂಧಿತರು. ಬಂಧಿತರಲ್ಲಿ ಸುಮಲತಾ ಮತ್ತು ರಮ್ಯಾ ಇಬ್ಬರೂ ಆಪ್ತ ಸ್ನೇಹಿತೆಯ ರಾಗಿದ್ದು, ಶೋಕಿಗಾಗಿ ಹೊಸ ಕಾರು ಖರೀದಿಸಿ ಕಳವು ಮಾಡುತ್ತಿದ್ದರು.

ಹೈದರಾಬಾದ್​ನಿಂದ ಬೆಂಗಳೂರಿಗೆ ಲಾಂಗ್​​​ ಡ್ರೈವ್ ಬಂದಿದ್ದ ಟೀಂ, ಬೆಳಗಿನ ಜಾವ ಹೆದ್ದಾರಿ ಪಕ್ಕದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ವ್ಯಾಗನಾರ್ ಕಾರು, ಕಳ್ಳತನಕ್ಕೆ‌ ಬಳಸುತ್ತಿದ್ದ ರಾಡ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ದೇವನಹಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.