Saturday, 14th December 2024

ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನೆರವಿನಿಂದ ಆರೋಗ್ಯಕರ ಮಗುವಿಗೆ ಜನ್ಮ ನೀಡಿ ಎರಡು ಗರ್ಭಾಶಯ ಹೊಂದಿದ್ದ 29 ವರ್ಷದ ಮಹಿಳೆ

⦁ ಆಲ್ಟಿಯಸ್ ಆಸ್ಪತ್ರೆಯ ಸ್ತ್ರೀರೋಗತಜ್ಞರ ತಂಡವು ಗರ್ಭಾಶಯದ ಅಸಮರ್ಪಕತೆಯನ್ನು ಸರಿಪಡಿಸಿತು, ಗರ್ಭಾಶಯದ ಲ್ಯಾಪರೋಸ್ಕೋಪಿಕ್ ಯೂನಿಫಿಕೇಷನ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.
⦁ ಎರಡು ಗರ್ಭಾಶಯದ ಈ ಅಪರೂಪದ ಸ್ಥಿತಿಯು ಪ್ರತಿ 1000ರಲ್ಲಿ 1ರಿಂದ 6 ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಎರಡು ಗರ್ಭಾಶಯ ಹೊಂದಿರುವ 29 ವರ್ಷದ ಮಹಿಳೆಯೊಬ್ಬರು ಗರ್ಭಾಶಯದ ಲ್ಯಾಪರೋಸ್ಕೋಪಿಕ್ ಯೂನಿಫಿಕೇಷನ್​ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯವಂತ ಮಗುವಿನ ಜನ್ಮ ನೀಡಿದ್ದಾರೆ. ಇದರ ಯಶಸ್ಸಿನ ಹಿಂದೆ ಆಲ್ಟಿಯಸ್ ಆಸ್ಪತ್ರೆಯ ಡಾ.ಬಿ.ರಮೇಶ್ ಮತ್ತು ಅವರ ಸ್ತ್ರೀರೋಗತಜ್ಞರ ತಂಡದ ಪರಿಣತಿಯಿದೆ, ಈ ಸಂಕೀರ್ಣ ಕಾರ್ಯವಿಧಾನವು ‘ಮುಲ್ಲೇರಿಯನ್ ಅನೋಮಲಿ’ ಎಂದು ಕರೆಯಲ್ಪಡುವ ಜನ್ಮಜಾತ ಅಸಮರ್ಪಕತೆಯನ್ನು ಸರಿಪಡಿಸುವ ಮೂಲಕ ಮಾಡಲಾಗಿದೆ. ಈ ಪ್ರಕರಣದಲ್ಲಿ ಮಹಿಳೆಯ ಗರ್ಭಾಶಯವು ಒಂದರ ಬದಲು ಎರಡು ಟೊಳ್ಳಾದ ಕುಳಿಗಳನ್ನು ಹೊಂದಿತ್ತು. ಯೂನಿಫಿಕೇಷನ್​ ಶಸ್ತ್ರಚಿಕಿತ್ಸೆಗೆ ಮೊದಲು ಮಹಿಳೆಯು ನಾಲ್ಕು ಪುನರಾವರ್ತಿತ ಗರ್ಭಪಾತಗಳನ್ನು ಅನುಭವಿಸಿದ್ದರು. ಇದೀಗ ಎಲ್ಲ ಸಮಸ್ಯೆಗೆ ಪರಿಹಾರ ಲಭಿಸಿದೆ.

ಮುಲ್ಲೇರಿಯನ್ ಅನೋಮಲಿ ಮಹಿಳೆಯರಿಗೆ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಜನ್ಮಜಾತ ಸಮಸ್ಯೆಯಾಗಿದೆ. ಇದು ಗರ್ಭಾಶಯ, ಗರ್ಭಕಂಠ ಮತ್ತು ಯೋನಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯು ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಅಸಾಮಾನ್ಯ ಆಕಾರಗಳು ಅಥವಾ ರಚನೆಗಳಿಗೆ ಕಾರಣವಾಗಬಹುದು, ಇದು ಫಲವತ್ತತೆ ಅಥವಾ ಗರ್ಭಧಾರಣೆಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸೂಕ್ತ ಚಿಕಿತ್ಸೆಯಿಲ್ಲದೆ ಈ ಅಸಮರ್ಪಕತೆ ಹೊಂದಿರುವ ಮಹಿಳೆಯರು ಪುನರಾವರ್ತಿತ ಗರ್ಭಪಾತಗಳು ಮತ್ತು ಅಕಾಲಿಕ ಶಿಶುವಿನ ಜನನದ ಸಮಸ್ಯೆಗೆ ತುತ್ತಾಗುತ್ತಾರೆ. ಈ ಸ್ಥಿತಿಯು ಸಾಮಾನ್ಯವಾಗಿ ಗಮನಾರ್ಹ ರೋಗಲಕ್ಷಣಗಳನ್ನು ತೋರಿಸುವುದಿಲ್ಲವಾದರೂ ಪುನರಾವರ್ತಿತ ಗರ್ಭಧಾರಣೆ ನಷ್ಟ ಅಥವಾ ಬಂಜೆತನವನ್ನು ಎದುರಿಸಬೇಕಾಗುತ್ತದೆ. ಇಂತಹ ಮಹಿಳೆಯರು ‘ಗರ್ಭಾಶಯದ ಲ್ಯಾಪರೋಸ್ಕೋಪಿಕ್ ಯೂನಿಫಿಕೇಷನ್​’ ಎಂಬ ವೈದ್ಯಕೀಯ ಕಾರ್ಯವಿಧಾನಕ್ಕೆ ಒಳಗಾಗಬಹುದು, ಅಲ್ಲಿ ವೈದ್ಯರು ಗರ್ಭಾಶಯದ ಅಸಾಮಾನ್ಯ ಆಕಾರವನ್ನು ಸರಿಪಡಿಸಿ ಪ್ರಜನನ ಕ್ರಿಯೆಗೆ ಅನುಕೂಲ ಸೃಷ್ಟಿಸುತ್ತಾರೆ. .

ಯಶಸ್ವಿ ಕಾರ್ಯವಿಧಾನದ ಕುರಿತು ಮಾತನಾಡಿದ ಅಲ್ಟಿಯಸ್ ಆಸ್ಪತ್ರೆಯ ಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಬಿ.ರಮೇಶ್, “ಮುಲ್ಲೇರಿಯನ್ ಏರುಪೇರು ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಪುನರಾವರ್ತಿತ ಗರ್ಭಪಾತಕ್ಕೆ ಒಳಗಾಗುತ್ತಾರೆ. ಇನ್ನೂ ಅನೇಕರಿಗೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ಇದು ಅವರ ಮೇಲೆ ದೈಹಿಕ ಮತ್ತು ಭಾವನಾತ್ಮಕ ಪರಿಣಾಮ ಬೀರುತ್ತದೆ. ಗರ್ಭಾಶಯದ ಲ್ಯಾಪರೋಸ್ಕೋಪಿಕ್ ಯೂನಿಫಿಕೇಷನ್​ ಈ ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೊಸ ಭರವಸೆಯನ್ನು ಒದಗಿಸುತ್ತದೆ. ಎರಡು ಗರ್ಭಾಶಯದಿಂದಾಗಿ 6-7 ಗರ್ಭಪಾತಗಳನ್ನು ಮಾಡಿದ ಮಹಿಳೆಯರು ಯೂನಿಫಿಕೇಷನ್​ ಶಸ್ತ್ರಚಿಕಿತ್ಸೆಯ ನಂತರ ತಾಯ್ತನವನ್ನು ಸಾಧಿಸಲು ಸಾಧ್ಯವಾದ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಎರಡು ಗರ್ಭಾಶಯ ಯೂನಿಫಿಕೇಷನ್​ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಜ್ಜುಗೊಂಡ ಭಾರತದ ಕೆಲವೇ ಆಸ್ಪತ್ರೆಗಳಲ್ಲಿ ಆಲ್ಟಿಯಸ್ ಒಂದಾಗಿದೆ” ಎಂಬುದಾಗಿ ಹೇಳಿದರು.

ಆಲ್ಟಿಯಸ್ ಆಸ್ಪತ್ರೆಯ ಬಗ್ಗೆ

ಆಲ್ಟಿಯಸ್ ಹಾಸ್ಪಿಟಲ್ಸ್ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ಸಂಯೋಜಿಸುವ ಸಮಗ್ರ ಮಾದರಿಯ ಮೂಲಕ ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಮುಂಚೂನಿ ಸಂಸ್ಥೆಯಾಗಿ ವಿಕಸನಗೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಸ್ತ್ರೀರೋಗತಜ್ಞ ಡಾ.ಬಿ.ರಮೇಶ್ ಸ್ಥಾಪಿಸಿದ ಆಲ್ಟಿಯಸ್​​ನಲ್ಲಿ ರೋಗಿಗಳ ಕಾಯಿಲೆಯನ್ನು ಮಾತ್ರ ಗುಣಪಡಿಸುವ ಉದ್ದೇಶವನ್ನು ಮೀರಿ ಸಮಗ್ರ ಚಿಕಿತ್ಸೆ ನೀಡುವ ವಿಶೇಷ ನಂಬಿಕೆಯನ್ನು ಹೊಂದಿದೆ. ಕಾರ್ಡಿಯಾಲಜಿ ಮತ್ತು 24X7 ತುರ್ತು ಆರೈಕೆಯಿಂದ ಹಿಡಿದು ಡಯಾಲಿಸಿಸ್ ಚಿಕಿತ್ಸೆ ಮತ್ತು ಹೊರರೋಗಿ ಚಿಕಿತ್ಸೆಗಳವರೆಗೆ – ಆಲ್ಟಿಯಸ್ ಎಲ್ಲವನ್ನೂ ನೀಡುತ್ತದೆ

ಕರ್ನಾಟಕದಲ್ಲಿ ಎಎಜಿಎಲ್ (ಅಮೆರಿಕನ್ ಅಸೋಸಿಯೇಷನ್ ಆಫ್ ಗೈನಕಾಲಜಿಕ್ ಲ್ಯಾಪ್ರೊಸ್ಕೋಪಿಸ್ಟ್ಸ್) ಪ್ರಮಾಣೀಕೃತ ತರಬೇತಿ ಕೋರ್ಸ್ ನಡೆಸುತ್ತಿರುವ ಏಕೈಕ ಕೇಂದ್ರ ಆಲ್ಟಿಯಸ್. ಡಾ.ಬಿ.ರಮೇಶ್ ಅವರು 500 ಕ್ಕೂ ಹೆಚ್ಚು ವೈದ್ಯರಿಗೆ ಲ್ಯಾಪರೋಸ್ಕೋಪಿಯಲ್ಲಿ ತರಬೇತಿ ನೀಡಿದ್ದಾರೆ.