Saturday, 23rd November 2024

ಕೊನೆಯ ಚುನಾವಣೆ ಹರಿಸಿ ಆಶಿರ್ವದಿಸಿ: ಮಾಜಿ ಸಚಿವ ಬೆಳ್ಳುಬ್ಬಿ

ಕೊಲ್ಹಾರ: ಜೀವನದ ಕೊನೆಯ ಚುನಾವಣೆಯ ಘಟ್ಟದಲ್ಲಿ ನಿಂತಿದ್ದೆನೆ ಹರಿಸಿ ಆಶಿರ್ವದಿಸಿ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮನವಿ ಮಾಡಿ ಕೊಂಡರು.

ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ರಾಜಕೀಯ ಹಿನ್ನೆಲೆ ಇಲ್ಲದೆ ರೈತಾಪಿ ಕುಟುಂಬದಿಂದ ಬಂದಿರುವ ನನನ್ನು ಕೈ ಹಿಡಿದು ಮನೆಯ ಮಗನಂತೆ ಹರಿಸಿ ಹಾರೈಸಿದ್ದಿರಿ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ನಿಂತಿದ್ದೆನೆ ಇದು ನನ್ನ ಕೊನೆಯ ಚುನಾವಣೆ ಆಗಿದ್ದು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಕೊನೆಯ ಬಾರಿ ನಿಮ್ಮ ಆಶಿರ್ವಾದ ಇರಲಿ ಎಂದರು.

ರೈತ ಕುಟುಂಬದಿಂದ ಬಂದಿರುವ ನನನ್ನು ಗ್ರಾಮ ಪಂಚಾಯತ ಹಂತದಿಂದ ಸಚಿವ ಸ್ಥಾನದ ವರೆಗೆ ಕೊಂಡೊ ಯ್ಯುವಲ್ಲಿ ಪಟ್ಟಣದ ಹಾಗೂ ಮತ ಕ್ಷೇತ್ರದ ಹಿಂದು, ಮುಸ್ಲಿಂ ಬಾಂಧವರು ಅಪಾರವಾಗಿ ಶ್ರಮಿಸಿದ್ದಿರಿ ಮತ್ತೊಮ್ಮೆ ಆಶಿರ್ವದಿಸಿ ಎಂದು ಮನವಿ ಮಾಡಿಕೊಂಡರು.

ಬ.ಬಾಗೇವಾಡಿ ಮತಕ್ಷೇತ್ರದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೆ ನಾನು. ನನ್ನ ಅವಧಿಯಲ್ಲಿ ಆಗಿರುವ ಅಭಿ ವೃದ್ಧಿ ಕಾರ್ಯಗಳನ್ನು ಶಾಸಕರು ತಮ್ಮ ಕಾರ್ಯಗಳು ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ವಿರುದ್ಧ ಹರಿಹಾಯ್ದರು. ನಿಮ್ಮ ಹಾಗೂ ನಿಮ್ಮ ಬೆಂಬಲಿಗರ ಕಾಟದಿಂದ ಮತಕ್ಷೇತ್ರದ ಜನತೆ ರೋಸಿ ಹೋಗಿದ್ದಾರೆ, ನಿಮ್ಮ ಬೆಂಬಲಿಗರು ನಿರಂತರವಾಗಿ ಜನರ ದಬ್ಬಾಳಿಕೆ ಮಾಡುತ್ತಿದ್ದಾರೆ. ನಿಮ್ಮ
ದುರಾಡಳಿತ ದಬ್ಬಾಳಿಕೆಗೆ ಮುಕ್ತಿ ನೀಡಲು ಮತಕ್ಷೇತ್ರದ ಜನತೆ ಕಾಯುತ್ತಿದ್ದಾರೆ.

ಬೆಳ್ಳುಬ್ಬಿ ಅವರು ಅಕ್ರಮವಾಗಿ ಪುನರ್ವಸತಿ ಕೇಂದ್ರದಲ್ಲಿ ನೂರಾರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಸುಖಾಸುಮ್ಮನೆ ನಿಮ್ಮ ಹಿಂಬಾ ಲಕರ ಮಾತುಗಳನ್ನು ಕೇಳಿ ವಿಧಾನಸಭೆಯ ಕಲಾಪದಲ್ಲಿ ಚರ್ಚೆ ಮಾಡುವ ಮೂಲಕ 1117 ಜನ ಅಮಾಯಕ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸಂತ್ರಸ್ತರ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಚು ನೀಡಿದ್ದಿರಿ ಅದಕ್ಕೆ ನೀವು ಖಂಡಿತವಾಗಿಯೂ ಬೆಲೆ ತೆರುತ್ತಿರಿ ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಜೀವನದ ಕೊನೆಯ ಚುನಾವಣೆ ಎದುರಿಸುತ್ತಿದ್ದೆನೆ ನನ್ನ ಪ್ರಥಮ ಚುನಾವಣೆಯಲ್ಲಿ ಅಪಾರ ಪ್ರೀತಿ ಹಾಗೂ ಬೆಂಬಲದೊಂದಿಗೆ ಹೇಗೆ ಆಶಿರ್ವದಿಸಿದ್ದಿರಿ ಅದೇ ತರಹ ಕೊನೆಯ ಚುನಾವಣೆಯಲ್ಲೂ ಕೂಡ ಹರಿಸಿ ಆಶಿರ್ವದಿಸಿ ಎಂದು ಮನವಿ ಮಾಡಿಕೊಂಡರು.

ಉತ್ತರ ಖಂಡ ರಾಜ್ಯಸಭಾ ಸದಸ್ಯ ನರೇಶ ಬನ್ಸಲ್ ಮಾತನಾಡುತ್ತಾ ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಬೆಳ್ಳುಬ್ಬಿ ಅವರು ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ನೀವು ಬೆಳ್ಳುಬ್ಬಿ ಅವರನ್ನ ಆಶಿರ್ವದಿಸಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳ್ಳುಬ್ಬಿ ಅವರನ್ನ ಸಚಿವ ರನ್ನಾಗಿ ಮಾಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಶಂಕರಗೌಡ ಪಾಟೀಲ್, ರಾಜಶೇಖರ ಶೀಲವಂತ, ಪ.ಪಂ ಮಾಜಿ ಅಧ್ಯಕ್ಷ ಕಲ್ಲಪ್ಪ ಸೊನ್ನದ, ವೀರುಪಾಕ್ಷಿ ಕೋಲ ಕಾರ, ಇಸ್ಮಾಯಿಲಸಾಬ ತಹಶೀಲ್ದಾರ, ಇಕ್ಬಾಲ್ ಮುಜಾವರ, ಈರಯ್ಯ ಮಠಪತಿ, ಅಮರಯ್ಯ ಹಿರೇಮಠ, ದಾನಮ್ಮ ಕಮತಗಿ, ಶೋಭಾ ಚೌಡಪ್ಪ ನವರ, ಶಾಂತಾಬಾಯಿ ಬಜಂತ್ರಿ ಇತರರು ಇದ್ದರು.