Monday, 14th October 2024

Lawyer Jagadish: ರೂಲ್ಸ್ ಬ್ರೇಕ್ ಮಾಡಿ ಟಾಯ್ಲೆಟ್ ತೊಳೆದ ಲಾಯರ್ ಜಗದೀಶ್! ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕದನ

Lawyer Jagadish

ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಗೆ (Bigg Boss Kannada 11) ಅದ್ಧೂರಿ ಆರಂಭ ದೊರಕಿದ್ದು, 17 ಸ್ಪರ್ಧಿಗಳು ಮನೆಯೊಳಗೆ ತೆರಳಿದ್ದಾರೆ. ಇಂದು (ಸೋಮವಾರ) ಮೊದಲ ಎಪಿಸೋಡ್ ಪ್ರಸಾರವಾಗಲಿದೆ. ಇದಕ್ಕೂ ಮುನ್ನ ಕಲರ್ಸ್ ಕನ್ನಡ ತನ್ನ ಸಾಮಾಜಿಕ ಖಾತೆಯಲ್ಲಿ ಒಂದೊಂದೆ ಪ್ರೊಮೋ ಬಿಡುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಜಗಳ, ಮನಸ್ತಾಪಗಳು ಶುರುವಾಗಿವೆ.

ಚೈತ್ರಾ ಕುಂದಾಪುರ (Chaithra Kundapura) ಹಾಗೂ ಉಗ್ರಂ ಮಂಜು ನಡುವಣ ಗಲಾಟೆ ತಾರಕಕ್ಕೇರಿದೆ. ಇದರ ನಡುವೆ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡಿದ ಲಾಯರ್ ಕೆ.ಎನ್‌‌. ಜಗದೀಶ್‌ (Lawyer Jagadish) ಅವರು ಮೊದಲ ದಿನ ತಮ್ಮ ಸ್ವರ್ಗ ನಿವಾಸಿಗಳೊಂದಿಗೆನೇ ಕಿರಿಕ್ ಮಾಡಿದ್ದಾರೆ. ಬಿಗ್ ಬಾಸ್ ನರಕದಲ್ಲಿರುವ ಸ್ಪರ್ಧಿಗಳಿಗೆ ಮೊದಲ ದಿನ ವಿಶೇಷ ಕೆಲಸ ನೀಡಿದ್ದಾರೆ. ಸ್ವರ್ಗದ ಕ್ಲೀನಿಂಗ್ ಕೆಲಸ ಮಾಡುವಂತೆ ನರಕದಲ್ಲಿರುವವರಿಗೆ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Bigg Boss Kannada 11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?

ಆದರೆ, ಸ್ವರ್ಗದಲ್ಲಿರುವ ಲಾಯರ್ ಜಗದೀಶ್ ಅವರು ವಾಷ್ ಬೇಸಿನ್ ಮತ್ತು ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ. ಟಾಯ್ಲೆಟ್ ಕ್ಲೀನ್ ಆಗಿದೆ ಎಂದು ಹೇಳಿದರೂ ಕೇಳದೆ ಸ್ವಚ್ಚಗೊಳಿಸಿದ್ದಾರೆ. ಇದು ಬಿಗ್ ಬಾಸ್ ನಿಯಮದ ವಿರುದ್ಧವಾಗಿದೆ. ನರಕವಾಸಿಗಳು ಮಾತ್ರ ಈ ಕೆಲಸ ಮಾಡಬೇಕು. ಇದರಿಂದ ರೊಚ್ಚಿಗೆದ್ದ ಸ್ವರ್ಗ ವಾಸಿಗಳು ಜಗದೀಶ್ ಅವರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಕೋಪಗೊಂಡ ಜಗದೀಶ್ ಮನೆಮಂದಿಯ ಮೇಲೆ ರೇಗಾಡಿದ್ದಾರೆ.

ನೀವು ಮಾಡಿದ ತಪ್ಪಿನಿಂದ ಇಡೀ ಟೀಮ್ ತೊಂದರೆ ಅನುಭವಿಸುತ್ತದೆ ಎಂದು ಧನರಾಜ್ ಆಚಾರ್ ಹೇಳಿದಾಗ ಮತ್ತಷ್ಟು ಕೆರಳಿದ ಜಗದೀಶ್ ‘ನೀವು ಗುಂಪು ಗುಂಪುಲ್ಲಿ ನಾಲ್ಕು ಮಂದಿ ಮಾತನಾಡಿದರೆ ಅದು ಟೀಮ್ ಆಗುವುದಿಲ್ಲ, ನಾನು ಆವಾಗಿನಿಂದ ನೋಡ್ತಾ ಇದ್ದೇನೆ, ನಾನು ಗೇಮ್ ಆಡಿದ್ರೆ ಚೆಕ್ ಮೇಟ್ ಆಡೋದು’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇದರ ನಡುವೆ ನರಕದಲ್ಲಿರುವವರಿಗೆ ಜಗದೀಶ್ ಅವರು ಬಿಸಿ ನೀರು ಕೊಟ್ಟಿದ್ದಾರೆ. ಇದು ಕೂಡ ನಿಯಮದ ವಿರುದ್ಧವಾಗಿದೆ ಎಂದು ಸ್ವರ್ಗದಲ್ಲಿರುವ ಸ್ಪರ್ಧಿಗಳು ಹೇಳಿದ್ದಾರೆ. ಇಲ್ಲಿ ನಿಜವಾಗಿಯೂ ರೂಲ್ಸ್ ಬ್ರೇಕ್ ಆಗಿದೆಯೇ?, ಆಗಿದ್ದರೆ ಲಾಯರ್ ಜಗದೀಶ್ ಅವರಿಗೆ ಬಿಗ್ ಬಾಸ್ ಏನು ಶಿಕ್ಷೆ ನೀಡುತ್ತಾರೆ ಎಂಬುದು ನೋಡಬೇಕಿದೆ.

ಈ ಸುದ್ದಿಯನ್ನೂ ಓದಿ | Chaithra Kundapura: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಅಲ್ಲೋಲಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ!

ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನವೇ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ದೊಡ್ಡ ಗಲಾಟೆಯೇ ನಡೆಯಲಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಅದರಂತೆ ಮನೆಯಲ್ಲಿ ಮೊದಲ ದಿನವೇ ಸಾಕಷ್ಟು ಜಗಳಗಳು ನಡೆದಂತೆ ಕಾಣುತ್ತಿದೆ.