Friday, 13th December 2024

ಲೋಕ ಅದಾಲತ್ ಜಿಲ್ಲೆಗೆ ಎರಡನೇ ಸ್ಥಾನ

ಸಿಂಧನೂರು: ಮೆಗಾ ಲೋಕ ಅದಾಲತ್ ರಾಜ್ಯಕ್ಕೆ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಜಿಲ್ಲೆಗೆ ಸಿಂಧನೂರು ಎರಡನೆಯ ಸ್ಥಾನ ಪಡೆದಿದ್ದು ಕಂಡುಬಂದಿದೆ.

ಸಾರ್ವಜನಿಕರ ಕುಂದುಕೊರತೆ ಶೀಘ್ರದಲ್ಲೇ ಪರಿಹರಿಸುವ ಸಲುವಾಗಿ ಲೋಕ್ ಅದಾಲತ್ ಸರ್ಕಾರ ಯೋಜನೆ ಮಾಡಿದೆ. ಇದರಲ್ಲಿ ರಾಜ್ಯಕ್ಕೆ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯಲ್ಲಿ ಎರಡನೇ ಸ್ಥಾನ ಸಿಂಧನೂರು ಪಡೆದಿರುವುದು ಹೆಮ್ಮೆಯ ವಿಷಯ ಆಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಧೀಶರು ಗೌರವಿಸಿ ಅಭಿನಂದನಾ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.