ಹರಪನಹಳ್ಳಿ: ಸಮಾಜದಲ್ಲಿರುವ ದೇವದಾಸಿಯಂಥ ಅನಿಷ್ಠ ಪದ್ದತಿ ಅಳಿಸಿ ಹಾಕುವ ಮೂಲಕ ಮಾನವ ಘನತೆ ಉಳಿಸ ಬೇಕಾಗಿದೆ. ದೇವದಾಸಿ ಪದ್ದತಿ ಮುಕ್ತ ಸಮಾಜಕ್ಕೆ ನಾವೆಲ್ಲರೂ ಪಣತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾದ ಎಂ.ಭಾರತಿ ಹೇಳಿದರು.
ಪಟ್ಟಣದ ಬಾಬು ಜಗಜೀವನ ರಾವ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲೂಕು ವಿವಿಧ ಇಲಾಖೆಗಳ ಹರಪನಹಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ದೇವದಾಸಿ ಪದ್ಧತಿ ತಡೆಯುವಿಕೆ ಕುರಿತು ಕಾನೂನು ಅರಿವು ಕಾರ್ಯಕ್ರಮದವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.
ದೇವದಾಸಿ ಪದ್ಧತಿಗೊಳಗಾದ ಮಹಿಳೆಯರು ನರಕ ಅನುಭವಿಸುತ್ತಿದ್ದು, ಸಮಾಜ ಅವರನ್ನು ಪ್ರಾಣಿಗಳಂತೆ ಬಳಿಸಿಕೊಂಡು ಶೋಷಣೆ ಮಾಡುತ್ತಿರುವುದು ವಿಷಾದನೀಯ ದೇವದಾಸಿ ನಿರ್ಮೂಲನೆ ಪದ್ಧತಿ ಕಾಯ್ದೆ ಜಾರಿಯಲ್ಲಿದ್ದರೂ ಹಲವಡೆ ಮುತ್ತು ಕಟ್ಟುವ ಮೂಲಕ ದೇವದಾಸಿ ಪದ್ದತಿಗೆ ಮಹಿಳೆಯರನ್ನು ನೂಕುತ್ತಿರುವುದು ಕಂಡು ಬರುತ್ತಿದೆ. ಅನಿಷ್ಠ ಪದ್ದತಿಯಿಂದ ಶೋಷಣೆಗೆ ಒಳಗಾಗಿರುವ ನಮ್ಮ ತಾಯಂದಿರು, ಸಹೋದರಿ ಯರು ಸಂಬಧಿಸಿದ ಇಲಾಖೆಗಳಿಗೆ ತಿಳಿಸಿ ತಡೆಯುವ ಕೆಲಸ ಮಾಡಬೇಕು. ದೇವದಾಸಿಯ ಮರು ಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ, ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದರು.
ಸಾರ್ವಜನಿಕರು ನ್ಯಾಯಾಲಯದಲ್ಲಿ ಇರುವ ಕೆಲವು ಸಣ್ಣ ಪುಟ್ಟ ಪ್ರಕರಣಗಳನ್ನು ರಾಷ್ಟಿçÃಯ ಲೋಕದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗುವುದು ಕೆಲವು ಪ್ರಕರಣಗಳನ್ನು ರಾಜಿ ಸೂತ್ರದ ಮೂಲಕ ಬಗೆಹರಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಕ್ಕಿರವ್ವ ಕೆಳಗೇರಿ, ಮಾತನಾಡಿದರು.
ಸರ್ಕಾರಿ ಅಭಿಯೋಜಕರಾದ ಎನ್. ಮಿನಾಕ್ಷಿ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ವಕೀಲರ ಸಂಘದ ಉಪಾಧ್ಯಕ್ಷ ಟಿ. ವೆಂಕಟೇಶ್, ಕಾರ್ಯದರ್ಶಿ ಕೆ. ಬಸವರಾಜ್, ದೇವದಾಸಿ ಮಹಿಳೆಯರ ಒಕ್ಕೂಟದ ಸದಸ್ಯೆ ಸರೋಜ ಹವಳದ,ಶಿಕ್ಷಕ ಅರ್ಜುನ್ ಪರಸಪ್ಪ, ಅಂಜಿನಪ್ಪ, ವಕೀಲರುಗಳಾದ ಕೆ. ಬಸವರಾಜ್, , ಎಂ. ಮೃತಂಜಯ್ಯ, ಬಿ. ಗೋಣಿಬಸಪ್ಪ, ಮಂಜ್ಯಾನಾಯ್ಕ, ಬಿ.ವಿ. ಬಸವನಗೌಡ, ಕೆ. ಸಣ್ಣ ನಿಂಗನಗೌಡ, ಮುತ್ತಿಗಿ ಮಂಜುನಾಥ್, ಕೆ.ಎಸ್. ವಾಮದೇವಾ, ಜಿ.ಎಸ್.ತಿಪ್ಪೇಸ್ವಾಮಿ, ಬಂಡ್ರಿ ಆನಂದ, ಕೆ. ಕೋಟ್ರೆಶ್, ನಂದೀಶ್ ನಾಯ್ಕ, ಹುಲಿಯಪ್ಪ, ಮುಜುಬರ್ ರಹಿಮಾನ್, ಎಸ್. ಜಾಕೀರ್, ಸಿದ್ದೇಶ್, ರೇವಣಸಿದ್ದಪ್ಪ, ಬಸವರಾಜ್, ಕೊಟ್ರೇಶ್, ಮತ್ತು ಇತರರು ಉಪಸ್ಥಿತರಿದ್ದರು.