Sunday, 1st December 2024

ಶ್ರೀಕ್ಷೇತ್ರದ ಹೆಗ್ಡೆಯವರ ಸೇವೆ ಶ್ಲಾಘನೀಯ ಕಾರ್ಯ: ಮಹಾಂತಲಿಂಗ ಶ್ರೀಗಳು

ಮಾನವಿ : ತಾಲೂಕಿನ ನಕ್ಕುಂದಿ ಗ್ರಾಮದಲ್ಲಿನ ಬಡವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮತ್ತು ಪರಿಸರ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕರೆಗುಡ್ಡ ಶ್ರೀ ಮಹಾಂತಲಿಂಗ ಶಿವಾಚಾರ್ಯರ ಮಠದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮಠದ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಈ ಒಂದು ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ವಿಶೇಷವಾಗಿ ಮಾನ್ವಿ ತಾಲೂಕಿನಲ್ಲಿ ಇದುವರೆಗೂ ನಿರ್ಗತಿಕರಿಗೆ ಮತ್ತು ಮಾಶಾಸನ ಮಂಜೂರಾತಿ ಮಾಡಿದ್ದು ಹಾಗೂ ಹಲವಾರು ಸೌಲಭ್ಯ ನೀಡುವುದರೊಂದಿಗೆ ಈ ಕರೋನಾ ಸಂದರ್ಭ ದಲ್ಲಿ ತಾಲೂಕಿನ,342 ಕುಟುಂಬಗಳಿಗೆ ಆಹಾರಧ್ಯಾನಗಳ ಸಾಮಗ್ರಿಗಳನ್ನು ನೀಡುತ್ತಿರುವುದು ಬಹು ದೊಡ್ಡ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹುಲಿಯಪ್ಪ, ಸದಸ್ಯ ಸದಸ್ಯರು, ಮೇಲ್ವಿಚಾರಕಿ ಗೀತಾ,ಸೇವಾ ಪ್ರತಿನಿಧಿ ಗಿರಿಜಾಶರಣಪ್ಪ, ಮರಿಸ್ವಾಮಿ, ಸೇರಿದಂತೆ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಭಾಗವಹಿಸಿದ ಗಣ್ಯರು ಯುವ ಸಮುದಾಯ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಆಚರಣೆಯ ಅಂಗವಾಗಿ 100 ಗಿಡಗಳನ್ನು ಉಚಿತವಾಗಿ ವಿತರಿಸಿ, ಸುಮಾರು 150 ಕ್ಕೂ ಹೆಚ್ಚು ಗಿಡಗಳನ್ನು ಸ್ವಸಹಾಯ ಸಂಘಗಳ ಸದಸ್ಯರು ನಾಟಿ ಮಾಡಿದರು. ಕಾರ್ಯಕ್ರಮದಿಂದ ಜನರಲ್ಲಿ ಪರಿಸರ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿತು.