Friday, 13th December 2024

ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳರು

ಪಾವಗಡ : ಪಟ್ಟಣದ ವಿನಾಯಕ ನಗರದ ಯೋಗಿನಾರಾಯಣಸ್ವಾಮಿ ದೇವಸ್ಥಾನ ರಸ್ತೆ ಬಳಿ ಮಗನನ್ನು ಟುಷನ್ ನಿಂದ ಕರೆ ತರಲು ಹೋಗುತ್ತಿದ್ದ ವೇಳೆ ದ್ವೀಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಸುನಿತ ಎಂಬವ ಮಹಿಳೆಯನ್ನು ಹಿಂಬಾಲಿಸಿ ಕತ್ತಿನಲ್ಲಿ ಇದ್ದ ಸುಮಾರು 80 ಸಾವಿರ ಬೆಲೆಬಾಳುವ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

ಮಾಂಗಲ್ಯ ಸರ್ ಕಳ್ಳತನ ಮಾಡುವ ವೇಳೆ ರಬಸವಾಗಿ ಮಹಿಳೆಯ ಕುತ್ತಿಗೆಯ ಭಾಗಕ್ಕೆ ಬಲ ವಾದ ಪೆಟ್ಟು ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಸಬ್ ಸ್ಪೆಕ್ಟರ್ ಗುರುನಾಥ್ ಹಾಗೂ ಸಿಬ್ಬಂದಿ ಹೋಗಿ ಸ್ಥಳ ಪರಿಶೀಲನೆ ಮಾಡಿ ನಂತರ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

ಪಾವಗಡ ಪಟ್ಟಣದ ಇಂತಹ ಪ್ರಕರಣಗಳು ಅಗಾಗ ಸರಣಿ ಪ್ರಕರಣಗಳು ನಡೆಯುತ್ತಿರುವ ಕಾರಣ ಈ ಭಾಗಕ್ಕೆ ವಿಶೇಷ ಕಾರ್ಯ ಪಡೆ ನೇಮಿಸಿ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರು ಕಳ್ಳರನ್ನು ಹಿಡಿಯವ ಕೆಲಸಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಗಮನಹರಿಸ ಬೇಕಾಗಿದೆ.

ಇತ್ತಿಚಿನ ದಿನಗಳಲ್ಲಿ ಪಟ್ಟಣ ಅಭಿವೃದ್ಧಿ ಹೊಂದುತ್ತಿರುವ ಕಾರಣ ಜನ ಸಾಂದ್ರತೆಯು ಹೆಚ್ಚಾಗುತ್ತಿದ್ದು ಈ ಭಾಗದಲ್ಲಿ ಸುಪ್ರಸಿದ್ಧ ಶನಿಮಹಾತ್ಮ ದೇವಸ್ಥಾನ ಇರುವ ಕಾರಣ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಹಾಗೂ ಗಡಿ ಪ್ರದೇಶವಾದ ಕಾರಣ ಪಕ್ಕದ ಆಂದ್ರಪ್ರದೇಶದ ಗ್ರಾಮಗಳಿಗೆ ಹೋಗಬೇಕಾದರೂ ನಮ್ಮ ಈ ನಮ್ಮ ಊರಿನಿಂದ ಹೋಗಬೇಕಾದ ಪರಿಸ್ಥಿತಿ ಇರುವ ಕಾರಣ ಪೋಲಿಸ್ ಇಲಾಖೆ ಹೆಚ್ವಿನ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಈ ಭಾಗದ ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.