Monday, 14th October 2024

ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಸದಸ್ಯರ ಆರೋಪ ಸಾಮಾನ್ಯ ಸಭೆ ರದ್ದು

ಹರಪನಹಳ್ಳಿ: ಪಟ್ಟಣದ ಕೇಂದ್ರ ಬಿಂದಾಗಿರುವ ಪುರಸಭೆಯ ಸಾಮಾನ್ಯ ಸಭೆ ಬುಧವಾರ ಜರುಗಿತು ಮದ್ಯವರ್ತಿಗಳ ಹಾವಳಿ, ಸಾರ್ವಜನಿಕರ ಕೆಲಸ ಕಾರ್ಯ ಗಳು ಸರಿಯಾಗಿ ಆಗುತ್ತಾ ಇಲ್ಲ, ಸಿಬ್ಬಂದಿಗಳ ನಿರ್ಲಕ್ಷ್ಯತನ ಹೀಗೆ ಸದಸ್ಯರು ಆರಂಭದಲ್ಲಿಯೇ ತೀವ್ರ ಅಸಮಾದಾನ ವ್ಯಕ್ತ ಪಡಿಸಿದರು.

ಗೊಂಗಡಿ ನಾಗರಾಜ ಮಾತನಾಡಿ ಸದಸ್ಯರು ಹೇಳಿದರೆ ಕೆಲಸಗಳು ಆಗಲ್ಲ, ಮದ್ಯವರ್ತಿಗಳು ಹಣ ಕೊಡಿಸಿ ಕೆಲಸ ಮಾಡಿಸಿಕೊಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಸಂಜೆ ೫.೩೦ ರ ನಂತರ ಪುರಸಭಾ ಕಚೇರಿಯಲ್ಲಿ ಸಿಬ್ಬಂದಿಗಳು ಬಹಳ ಬ್ಯುಸಿಯಿಂದ ಇರುತ್ತಾರೆ ಎಂದು ಅವರು ಟೀಕಿಸಿದರೆ ಹಿರಿಯ ಸದಸ್ಯ ಎಂ.ವಿ.ಅAಜಿನಪ್ಪ ಅವರು ಸದಸ್ಯರ ಬಳಿ ಹೋದರೆ ಕೆಲಸ ಆಗಲ್ಲ, ಅಧಿಕಾರಿಗಳ ಬಳಿ ತೆರಳಿದರೆ ಗ್ಯಾರಂಟಿ ಕೆಲಸ ಆಗುತ್ತದೆ ಎಂಬ ಪ್ರತೀತಿ ಬೆಳೆದಿದೆ. ಇಲ್ಲಿ ಬ್ರೋಕರ್ ಇಟ್ಟುಕೊಂಡು ಕೆಲಸ ಮಾಡಲಾಗುತ್ತದೆ ಎಂದು ಆರೋಪಿಸಿದರು. ಲಾಟಿ ದಾದಾಪೀರ, ಉದ್ದಾರ ಗಣೇಶ, ಟಿ.ವೆಂಕಟೇಶ ಸಹ ದ್ವನಿಗೂಡಿಸಿ ಮದ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಸಭೆ ಆರಂಭಕ್ಕೆ ಅಜೆಂಡ ಓದಲು ಆರೋಗ್ಯ ನಿರೀಕ್ಷಕ ಮಂಜುನಾಥ ಅವರು ಮುಂದಾದಾಗ ಎದ್ದು ನಿಂತ ಕಿರಣ್ ಶಾನ್‌ಬಾಗ್ ಇವತ್ತಿನ ವಿಷಯಗಳಿಗೆ ಹೋಗುವ ಪೂರ್ವದಲ್ಲಿ ನಮ್ಮ ನಮ್ಮ ವಾರ್ಡಗಳ ಸಮಸ್ಯೆ ಬಗೆಹರಿಸಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾತು ಆರಂಭಿಸಿದಾಗ ಲಾಟಿ ದಾದಾಪೀರ ಪ್ರತಿ ಮಿಟಿಂಗ್‌ನಲ್ಲಿ ನಿರ್ಣಯ ಆಗೋದೆ ಒಂದು ನೀವು ಮಾಡೋದೆ ಇನ್ನೊಂದು ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ಪಟ್ಟಣದಲ್ಲಿ ೧೭೯೮ ಖಾತೆಗಳು ಕೈ ಬಿಟ್ಟು ಹೋಗಿವೆ ಕಾನೂನು ಸಲಹೆ ಪಡೆದು ಸರಿಪಡಿಸಿರಿ ಎಂದು ಹಿಂದಿನ ಸಭೆಯಲ್ಲಿ ನಾವು ಹೇಳಿದ್ದರೆ ಈ ಸಭೆಗೆ ತಪ್ಪು ಮಾಹಿತಿ ವಿಷಯದಲ್ಲಿ ಸೇರಿಸಿದ್ದೀರಿ ಎಂದು ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಸಾಹೇಬ್ ಅಸಮಾದಾನ ವ್ಯಕ್ತ ಪಡಿಸಿದರು. ಎಂ.ವಿ.ಅAಜಿನಪ್ಪ ನವರು ಸಹ ಆಕ್ರೋಶ ವ್ಯಕ್ತಪಡಿಸಿದರು.

೧೧ನೇ ವಾರ್ಡ್ ಸದಸ್ಯ ಜಾಕೀರ್ ಹುಸೇನ್ ಸರ್ಖಾವಾಸ್ ಮಾತನಾಡಿ ನನ್ನ ವಾರ್ಡಿಗೆ ಇದುವರೆಗೂ ಸುಸಜ್ಜಿತವಾದ ರಸ್ತೆಯಿಲ್ಲ, ಚರಂಡಿಯಿಲ್ಲ, ಸಿಡಿ ಹಾಕಿಲ್ಲ ವಾರ್ಡಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ, ಅನುದಾನ ನೀಡುತ್ತಾ ಇಲ್ಲ, ಹಿಂಗಾದರೆ ಜನರಿಗೆ ನಾವು ಏನು ಉತ್ತರ ಕೋಡೋಣ ಎಂದು ತೀವ್ರ ಅಸಮಾದಾನ ವ್ಯಕ್ತ ಪಡಿಸಿದರು. ಅಧ್ಯಕ್ಷ ಮಂಜುನಾಥ್ ಇಜಂತ್ಕರ್ ಶೀಘ್ರದಲ್ಲೇ ಸರಿಪಡಿಸುವುದಾಗಿ ತಿಳಿಸಿದರು.

೨೭ ನೇ ವಾರ್ಡ್ನ ಸದಸ್ಯ ಡಿ.ರೊಕ್ಕಪ್ಪ ಮಾತನಾಡಿ ಕಳೆದ ಎರಡು ವರ್ಷದಿಂದ ಟೆಂಡರ್ ಆಗಿದ್ದು ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು ಇದಕ್ಕೆ ಉತ್ತರಿಸಿದ ಅಭಿಯಂದರ ಸಿದ್ದೇಶ್ವರ ಸ್ವಾಮಿ ವಾರ್ಡಿನ ಕೆಲವು ಗೊಂದಲಗಳಿAದ ವಿಳಂಬವಾಗಿತ್ತು ಎಂದರು ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ನಾಳೆಯಿಂದಲೇ ಕಾಮಗಾರಿ ಪ್ರಾರಂಬಿಸಲು ತಿಳಿಸುತ್ತೇನೆ ಎಂದರು.

೫ನೇ ವಾರ್ಡ ಸದಸ್ಯ ಹೆಚ್.ಎಂ.ಅಶೋಕ್ ಮಾತನಾಡಿ ವಾರ್ಡ್ಗಳಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿರುವುದರ ಬಗ್ಗೆ ವಾರ್ಡ ಸದಸ್ಯರ ಗಮನಕ್ಕೆ ತರುವುದಿಲ್ಲ ಎಂದು ದೂರಿದ ಅವರು ಮಹಾ ನಗರ ಯೋಜನೆಯನ್ನು ಏಕೆ ಪಟ್ಟಣದಲ್ಲಿ ಅನುಷ್ಠಾನ ಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಪಟ್ಟಣದಲ್ಲಿ ಅಳವಡಿಸುವ ಬೀದಿ ದೀಪಗಳು ಅತ್ಯಂತ ಕಳಪೆಯಿಂದ ಕೂಡಿವೆ, ಅಳವಡಿಸಿದ ೨-೩ ದಿನದಲ್ಲಿ ದೀಪ ಆರಿ ಹೋಗುತ್ತಿವೆ ಎಂದು ಸದಸ್ಯರಾದ ಎಂ.ವಿ.ಅAಜಿನಪ್ಪ, ಸುಮಾ, ಗೊಂಗಡಿ ನಾಗರಾಜ, ಲಾಟಿದಾದಾಪೀರ, ಅಶೋಕ, ಜಾಕೀರ ಹುಸೇನ್, ಅಬ್ದುಲ್ ರಹಿಮಾನ್, ವೆಂಕಟೇಶ ಆರೋಪಿಸಿ ಮುಂದೆ ಉತ್ತಮ ಗುಣ ಮಟ್ಟದ ದೀಪ ಅಳವಡಿಸಲು ಸೂಚಿಸಿದರು.

೨೦ ಮತ್ತು ೨೨ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆಯಾ ಭಾಗದ ಸದಸ್ಯರು ಹೇಳಿದರು. ಒಟ್ಟಿನಲ್ಲಿ ಇಂದಿನ ಸಭೆಗೆ ಚರ್ಚಿಸಲು ಇಟ್ಟಿದ್ದ ವಿಷಯಗಳನ್ನು ಚರ್ಚಿಸಲು ಆಗದೆ ಮುಂದಿನ ಸಭೆಗೆ ಹಾಕಿ ಸಭೆ ಮುಕ್ತಾಯಗೊಳಿಸಲಾಯಿತು. ಅಧ್ಯಕ್ಷ ಮಂಜುನಾಥ ಇಜಂತಕರ್ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಭೀಮವ್ವ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಇತರರು ಉಪಸ್ಥಿತರಿದ್ದರು.