ಬಸವನಬಾಗೇವಾಡಿ: ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.
ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರಾಗಿ ಈರಣ್ಣ ಪಟ್ಟಣಶೆಟ್ಟಿ. ಉಪಾಧ್ಯಕ್ಷರಾಗಿ ಮೀರಾ ಸಾಬ್ ಕೊರಬು. ಯಮನೂರಿ ಬೀದರಕುಂದಿ. ಪರಶುರಾಮ್ ಜಮಖಂಡಿ.ಸಂಗಮೇಶ ವಾಡೇದ. ಸಂಚಾಲಕರಾಗಿ ಶಂಕರಗೌಡ. ಶಿ. ಬಿರಾದಾರ. ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಅಳ್ಳಗಿ ಹಾಗೂ ಖಜಾಂಚಿಯಾಗಿ ರವಿ. ನಾ. ಚಿಕ್ಕೊಂಡ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರದ ಬಸಪ್ಪ ಪೂಜಾರಿ. ಮುಖಂಡರಾದ ಬಸವರಾಜ್ ಗೊಳಸಂಗಿ ಬಸಣ್ಣ ದೇಸಾಯಿ ಕಲ್ಲೂರ. ಸಂಗಮೇಶ್ ಓಲೆಕಾರ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ. ಸುಭಾಷ್ ಚಿಕ್ಕೊಂಡ. ಯಮನಪ್ಪ ನಾಯ್ಕೋಡಿ. ಬಸವರಾಜ್ ಹಾರಿವಾಳ. ಶಂಕರಗೌಡ ಚಿಕ್ಕೊಂಡ. ಅನಿಲ್ ಅಗರವಾಲ.ಸಂಕನಗೌಡ ಪಾಟೀಲ್. ಶೇಖರ್ ಗೊಳಸಂಗಿ. ನಿಂಗಪ್ಪ ಅವಟಿ. ಬಸಗೊಂಡ ಹಾದಿಮನಿ. ಬಸವರಾಜ್ ಕೋಟಿ. ವಿಶ್ವನಾಥ್ ಹರಿವಾಳ. ಸುನಿಲ್ ಚಿಕ್ಕೊಂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.