Friday, 13th December 2024

ಪಟ್ಟಣದ ವಿವಿಧ ವೃತಗಳಲ್ಲಿ ಶ್ರದ್ದಾಂಜಲಿ ಸಭೆ

ಇಂಡಿ: ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀಸಿದ್ದೇಶ್ವರ ಶ್ರೀಗಳು ಲಿಂಗೈಕೆರಾದ ಪ್ರಯುಕ್ತ ಪಟ್ಟಣದ ವಿವಿಧ ವೃತಗಳಲ್ಲಿ ಶ್ರದ್ದಾಂಜಲಿ ಸಭೆ ಜರುಗಿದವು.

ಈ ಸಂದರ್ಬದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ಮಾತನಾಡಿ ಶ್ರೀಸಿದ್ದೇ ಶ್ವರ ಮಹಾಸ್ವಾಮಿಗಳು ಹಿಂದು ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿದ್ದರು ಅವರು ಹೇಳುವ ಪ್ರವಚನ ಅಧ್ಯಾತ್ಮಿಕಕೆಯ ಕಡೆ ಕೊಂಡ್ಯೋತ್ತಿತ್ತು ಮನುಷ್ಯನ ಬದುಕು ಹೇಗಿರ ಬೇಕು, ಧರ್ಮ ಎಂದರೇನು ಪರಿಸರ ಜೀವರಾಶಿಗಳ ಬಗ್ಗೆ ಕಳಕಳಿಯುಳ್ಳವರಾಗಿದ್ದರು.

ಎಷ್ಟೋ ಬಾರಿ ಸೂಪಿ ಸಂತರ ತತ್ವವಗಳು ತಿಳಿಸಿ ಮಾನವೀಯ ಮೌಲ್ಯಗಳಲ್ಲಿ ಬದಕಲು ಮಾರ್ಗದರ್ಶನ ನೀಡಿದ ಮಹಾನ್ ದಾರ್ಶನಿಕ ಪುರುಷ ಇಂತನ ದಿವ್ಯಜ್ಯೋತಿ ಗಲಿಕೆ ನೋವು ತಂದಿದೆ ಇಡೀ ಮಾನವ ಕುಲಕೋಟಿ ಇವರ ಆರೋಗ್ಯ ಒಳ್ಳೇಯದಾಗಲಿ ಎಂದು ಪ್ರಾರ್ಥಿಸಿದರೂ ಫಲ ನೀಡಲ್ಲಿಲ್ಲ ದೇವರು ದೇವರಲ್ಲಿಗೆ ಹೋಗಿದ್ದಾರೆ ಸದಾ ಅಂರ್ತಗಾಮಿ ಯಾಗಿ ಭಕ್ತರನ್ನು ಕಾಪಾಡುತ್ತಾರೆ ಅತಹ ಶಕ್ತಿ ಅವರಲ್ಲಿ ಪ್ರಾರ್ಥಿಸಿದರು.

ಜೈನುದೀನ ಬಾಗವಾಮ. ಅಯುಬ ಬಾಗವಾನ, ರಷೀದ ಅರಬ, ಮುನ್ನಾ ಡಾಂಗೆ , ಸತಾರ ಬಾಗವಾನ, ರೈಸ ಅಷ್ಠೇಕರ್, ಸತೀಶ ಕಂಬಾರ, ಮಹಮ್ಮದಮುಸ್ತಾಕ ನಾಟೀಕಾರ, ಜಬ್ಬರ ಅರಬ ಸೇರಿದಂತೆ ಅನೇಕ ಇಸ್ಲಾಂ ಧರ್ಮದ ಮುಖಂಡರು ಶ್ರದ್ದಾಂಜಲಿ ಸಲ್ಲಿಸಿದರು.

 
Read E-Paper click here