Wednesday, 11th December 2024

ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರದ ಪಿತಾಮಹರು : ಸಚಿವ ಶ್ರೀರಾಮುಲು

ಹರಪನಹಳ್ಳಿ: ಈ ದೇಶವನ್ನು ೬೦ ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದರು ಯಾವುದೇ ಅಭಿವೃದ್ದಿ ಕಾರ್ಯ ಗಳನ್ನು ಮಾಡದೇ ಭ್ರಷ್ಟಚಾರದ ಆಡಳಿತ ನಡೆಸಿ ಭ್ರಷ್ಟಾಚಾರದ ಪಿತಾಮಹ ಎಂದು ಕರೆಸಿಕೊಂಡಿರುವ ಏಕೈಕ ಸರ್ಕಾರ ಆದು ಕಾಂಗ್ರೆಸ್ ಸರ್ಕಾರ ಅವದಿಯಲ್ಲಿ ಇತ್ತು, ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣದ ಶ್ರೀಕಾಶಿಸಂಗಮೇಶ್ವರ ಬಡಾವಣೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ಧೇಶಕ ಆರುಂಡಿ ನಾಗರಾಜ್ ರವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಈಗ ರಾಜ್ಯ ಕಾಂಗ್ರೆಸ್ ನಾಯಕರಲ್ಲೇ ಎರಡು ಮೂರು ಗುಂಪುಗಳಾಗಿ ಮುಖ್ಯಮಂತ್ರಿ ಹುದ್ದೆಗಾಗಿ ಅವರವರಲ್ಲೇ ಭಿನ್ನಮತ ಸ್ಪೋಟ ವಾಗಿದೆ. ಕಾಂಗ್ರೆಸ್ ಆಡಳಿತಕ್ಕೆ ಬರುವ ಮುಂಚೆಯೇ ಮುಖ್ಯಮಂತ್ರಿ ಹುದ್ದೆಗಾಗಿ ಸೀಟು ಹಿಡಿಯುವಂತ ಕೆಲಸ ಕಾಂಗ್ರೆಸ್ ನಾಯಕರ ಗುಂಪು ರಾಜಕಾರಣವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ವಿಧಾನಪರಿಷತ್ತ್ ೨೫ ಸ್ಥಾನಗಳಲ್ಲಿ ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ. ಈ ಭಾರಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಭ್ಯಾರ್ಥಿ ವೈ.ಎಂ. ಸತೀಶ್ ಗೇಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯಾರ್ಥಿ ಕೆ.ಸಿ. ಕೊಂಡಯ್ಯ ಎರಡು ಭಾರಿ ವಿಧಾನ ಪರಿಷತ್ತ್ ಸದಸ್ಯರಾದರೂ ಸಹ ಅಭಿವೃದ್ಧಿ ಮಾತ್ರ ಸೂನ್ಯ ಆದ್ದರಿಂದ ಈ ಭಾರಿ ಬಿಜೆಪಿ ಬೆಂಬಲಿತ ಅಭ್ಯಾರ್ಥಿ ವೈ.ಎಂ. ಸತೀಶ್ ಮೇಲ್ಮನವಿಯ ಸದಸ್ಯರಾಗಲಿದ್ದಾರೆ. ಎಂದರು.

ಕೇಂದ್ರ ಸರ್ಕಾರ ಮೂರು ಮಸೂದೆಯನ್ನು ಹಿಂಪಡೆದಿದ್ದು ರೈತರ ಹಿತದೃಷ್ಠಿಯಿಂದ ಹೊರತು ಯಾವುದೇ ರಾಜಕಾರಣಿಗಳ ಒತ್ತಡದಿಂದಲ್ಲ ದೇಶಕ್ಕೆ ಮೊದಲು ರೈತರನ್ನು ಗೌವರಿಸುವುದು ನಮ್ಮ ನಿಮ್ಮಲ್ಲರ ಆಧ್ಯಕರ್ತವ್ಯ, ದೇಶದಲ್ಲಿ ೧೩೦ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶದ ಜನರಿಗಾಗಿ ದೇಶದಲ್ಲೇ ಲಸಿಕೆ ತಯಾರಿಸಿದ ಮಹಾನ್ ನಾಯಕ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವಾಯಿತು ಎಂದು ವಿಶ್ವಸ ವ್ಯಕ್ತಪಡಿಸಿದರು.

ಎಸ್ಟಿ ಮಿಸಲಾತಿಯನ್ನು ೭.೫/ ಸೇರಿಸಲು ನಾನು ಸತಾಯಗತಾಯ ಪ್ರಯತ್ನಮಾಡುತ್ತಿದ್ದೇನೆ ನಮ್ಮ ಬಿಜೆಪಿ ಸರ್ಕಾರದ ಆಡಳಿತ ದಲ್ಲೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾನು ಎಸ್ಟಿ ಮೀಸಲಾತಿಗಾಗಿ ರಾಜ್ಯದಲ್ಲಿ ಹೋರಾಟ ಆರಂಭಿಸದ್ದು, ನಾನೇ, ನಾನೇ ಸರಿಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಹರಪನಹಳ್ಳಿಯಲ್ಲಿ ನಿಷ್ವಂತ ಬಿಜೆಪಿ ಮುಖಂಡ ಕಾರ್ಯಕರ್ತರಿದ್ದಾರೆ ಇಂತಹ ಮುಖಂಡರು ನನಗೆ ರಾಜಕೀಯ ಭವಿಷ್ಯವನ್ನು ನೀಡಿದ್ದಾರೆ ಮುಂಬರುವ ದಿನಗಳಲ್ಲಿ ಎಲ್ಲಾವೂ ಸರಿಹೊಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾ.ರ.ಸಾ.ನಿ. ನಿರ್ಧೇಶಕ ಆರುಂಡಿ ನಾಗರಾಜ್ ಮಾಜಿ ಜಿಲ್ಲಾ.ಪಂ.ಸದಸ್ಯ ಸುವರ್ಣಮ್ಮ ಆರುಂಡಿ ನಾಗರಾಜ್, ವೇಣುಗೋಪಾಲ್ , ಆದಿತ್ಯಾ, ಮತ್ತು ಇತರರು ಇದ್ದರು.