Saturday, 14th December 2024

ಶಾಸಕ ಜಿ. ಕರುಣಾಕರರೆಡ್ಡಿಗೆ ಕೋವಿಡ್ ಪಾಸಿಟಿವ್

ಹರಪನಹಳ್ಳಿ : ಶಾಸಕ ಜಿ.ಕರುಣಾಕರರೆಡ್ಡಿ ಯವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಅವರು ಒಂದು ವಾರ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಈ ಕುರಿತು ಸ್ವತಃ ಅವರೇ ಹೇಳಿಕೆ ನೀಡಿದ್ದು, ನನಗೆ ಕೋವಿಡ್ ಸೊಂಕು ಆವರಿಸಿದ ಹಿನ್ನಲೆಯಲ್ಲಿ ವೈದ್ಯರ ಶಿಪಾರಸ್ಸಿನಂತೆ ಬಳ್ಳಾರಿಯ ತಮ್ಮ ನಿವಾಸ ದಲ್ಲಿಯೇ ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳಿದರು.

ಆದ್ದರಿಂದ ಜ.೨೬ ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹರಪನಹಳ್ಳಿಗೆ ಬರಲು ಸಾದ್ಯವಾಗುವುದಿಲ್ಲ ಮತ್ತು ೮ -೧೦ ದಿವಸ ಕ್ಷೇತ್ರಕ್ಕೆ ಬರದೆ ಆಗದಿರುವು ದಕ್ಕೆ ವಿಷಾದಿಸುತ್ತೇನೆ. ಕೆಲಸ, ಕಾರ್ಯಗಳ ಕುರಿತು ವಿವಿಧ ಇಲಾಖೆಗಳ ಅಽಕಾರಿಗಳ ಜೊತೆ ಮಾತನಾಡಿದ್ದೇನೆ , ಜನತೆ ಸಹಕರಿಸಲು ಅವರು ಕೋರಿ ದ್ದಾರೆ.